ರಾಯಚೂರು : ಮಂತ್ರಾಲಯದಲ್ಲಿ ಗುರು ರಾಯರ ದರ್ಶನ ಪಡೆದ ಮಾಜಿ ಸಚಿವ ಹೆಚ್.ಡಿ. ರೇವಣ್ಣ

ರಾಯಚೂರು : ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಇಂದು ಧಾರ್ಮಿಕ ಭಕ್ತಿಯಿಂದ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿ ವೃಂದಾವನದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ ಪಡೆದರು. ಶ್ರೀಗಳು ರೇವಣ್ಣ ಅವರಿಗೆ ಮಂತ್ರಾಕ್ಷತೆ, ಫಲಪುಷ್ಪ ನೀಡಿ ಆಶೀರ್ವದಿಸಿದರು.

ಇದಕ್ಕೂ ಮೊದಲು ರೇವಣ್ಣ ಅವರು ಮಂತ್ರಾಲಯದ ದೇವಿ ಮಂಚಾಲಮ್ಮ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರು ಅವರೊಂದಿಗೆ ಭಾಗವಹಿಸಿದ್ದರು.

ಇನ್ನು ರಾಯಚೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ಇವತ್ತು ಕೆಲ ಶಕ್ತಿಗಳನ್ನ ದಮನ ಮಾಡಬೇಕು ಅಂದ್ರೆ ದೇವರ ಹತ್ರ ಹೋಗಬೇಕಲ್ಲ. ಆ ಕೆಲಸ ಮಾಡುತ್ತಿದ್ದೇನೆ ಹೀಗಾಗಿ ಮಂತ್ರಾಲಯಕ್ಕೆ ಹೊರಟಿದ್ದೇನೆ ಎಂದು ಹೇಳಿದ್ದರು.

Author:

...
Keerthana J

Copy Editor

prajashakthi tv

share
No Reviews