Food Recipes : ಮನೆಯಲ್ಲೇ ಚಿಕನ್‌ ಲಿವರ್‌ ಫ್ರೈ ಒಮ್ಮೆ ಈ ರೀತಿ ಮಾಡಿ ನೋಡಿ

FOOD RECIPES : ಚಿಕನ್ ತಿಂದು ಬೇಜಾರಾಗಿದ್ಯಾ? ಹಾಗಿದ್ರೆ ಮನೆಯಲ್ಲೇ ಘಮ ಘಮಿಸೋ ಚಿಕನ್ ಲಿವರ್ ಕರಿ ಮಾಡಿ. ಚಿಕನ್‌ ಲಿವರ್‌ ಪ್ರೈ ಅನ್ನು ಮನೆಯಲ್ಲೇ ಸುಲಭವಾಗಿ ಮಾಡಲು ಬೇಕಾಗುವ ಸಾಮಗ್ರಿಗಳೆಂದರೆ

  • ಚಿಕನ್ ಲಿವರ್ – 250 ಗ್ರಾಂ
  • ಈರುಳ್ಳಿ – 2 (ಸಣ್ಣಗೆ ಹೆಚ್ಚಿದ ಈರುಳ್ಳಿ)
  • ಟೊಮೇಟೋ – 1
  • ಹಸಿಮೆಣಸು – 2
  • ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
  • ಕಾಳುಮೆಣಸು ಪುಡಿ – 1/2 ಟೀ ಸ್ಪೂನ್
  • ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
  • ಧನಿಯಾ ಪುಡಿ – 1 ಟೀ ಸ್ಪೂನ್
  • ಹುಳಿ ಪುಡಿ / ಲೆಮನ್ ಜ್ಯೂಸ್ – 1 ಟೀ ಸ್ಪೂನ್
  • ಉಪ್ಪು – ರುಚಿಗೆ ತಕ್ಕಷ್ಟು
  • ಎಣ್ಣೆ – 2 ಟೇಬಲ್ ಸ್ಪೂನ್
  • ಕರಿಬೇವು, ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ

ಮಾಡುವ ವಿಧಾನ :

ಮೊದಲು ಲಿವರ್‌ ಅನ್ನು ಚೆನ್ನಾಗಿ ತೊಳೆಯಿರಿ. ನೀರಿನಲ್ಲಿ ಸ್ವಲ್ಪ ಉಪ್ಪು ಹಾಕಿ 5 ನಿಮಿಷ ನೆನೆಸಿಟ್ಟ ನಂತರ ತೊಳೆಯಬಹುದು (ವಾಸನೆ ಕಡಿಮೆಯಾಗಲು). ನಂತರ ಒಂದು ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕರಿಬೇವು, ಹಸಿಮೆಣಸು ಹಾಕಿ ತುರಿದ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವ ತನಕ ಬೆಚ್ಚಗಿಡಿ. ಈರುಳ್ಳಿ ಬಾಡಿದ ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಸುಡುವ ವರೆಗೆ ಬೆಚ್ಚಗಿಡಿ. ಟೊಮೇಟೋ, ಮೆಣಸು ಪುಡಿ, ಧನಿಯಾ ಪುಡಿ, ಕಾಳುಮೆಣಸು ಪುಡಿ, ಉಪ್ಪು ಹಾಕಿ ಮಸಾಲೆ ಒಗ್ಗುವುವರೆಗೆ ಬೇಯಿಸಿ. ಲಿವರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮದ್ಯಮ ಉರಿಯಲ್ಲಿ 10-12 ನಿಮಿಷಗಳವರೆಗೆ ಮುಚ್ಚಿ ಬೇಯಿಸಿ (ನೀರನ್ನು ಹೊರಹಾಕಿ ಕಡಿಮೆ ನೀರಿನಲ್ಲಿ ಫ್ರೈ ಆಗುವಂತೆ ನೋಡಿಕೊಳ್ಳಿ). ಕೊನೆಯಲ್ಲಿ ಲಿಂಬೆರಸ ಅಥವಾ ಸ್ವಲ್ಪ ಹುಳಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಕೊತ್ತಂಬರಿ ಸೊಪ್ಪುಸೇರಿಸಿ ಅಲಂಕರಿಸಿ.

ಈ ರುಚಿಕರ ಚಿಕನ್ ಲಿವರ್ ಫ್ರೈ ಅನ್ನು ಅಕ್ಕಿ ರೊಟ್ಟಿ ಅಥವಾ ಅನ್ನದ ಜೊತೆ ಸರ್ವ್ ಮಾಡಬಹುದು. ಬಿಸಿ ಬಿಸಿ ಫ್ರೈಗೆ ಸ್ವಲ್ಪ ನಿಂಬೆ ರಸ ಹಾಕಿದರೆ ಇನ್ನಷ್ಟು ರುಚಿ ಬರುತ್ತದೆ

Author:

...
Sushmitha N

Copy Editor

prajashakthi tv

share
No Reviews