BUEATY TIPS: ನಿಮ್ಮ ಮುಖ ಬೆಳ್ಳಗಾಗಲು ಈ ಟಿಪ್ಸ್ ಫಾಲೋ ಮಾಡಿ

BUEATY TIPS: 

ನಾವು ಜೀವನವನ್ನು ಹೇಗೆ ಅನುಸರಿಸುತ್ತೇವೆ ಹಾಗೆ ನಮ್ಮ ಆರೋಗ್ಯ, ನಮ್ಮ ಆಹಾರ ಪದ್ಧತಿ ಮತ್ತು ನಮ್ಮ ಸೌಂದರ್ಯ ಇರುತ್ತದೆ. ಆರೋಗ್ಯಕರವಾದ ಜೀವನಶೈಲಿಗೆ ಹೆಚ್ಚು ಒತ್ತು ಕೊಟ್ಟರೆ, ಅದರಿಂದ ಅತ್ಯುತ್ತಮ ಚರ್ಮದ ಕಾಂತಿ ನಮಗೆ ಸಿಗುತ್ತದೆ.

* ಇಡೀ ರಾತ್ರಿ ಪಳಪಳನೆ ಹೊಳೆಯುವ ಮುಖ ನಿಮ್ಮದಾಗಲು ಅನುಕೂಲವಾಗುವಂತೆ ಇರುವಂತಹ ಬಾದಾಮಿ ಮತ್ತು ಜೋಜೋಬಾ ಎಣ್ಣೆ ಉಪಯೋಗಿಸುವುದರಿಂದ ಅತ್ಯದ್ಭುತ ಪೌಷ್ಠಿಕ ಸತ್ವಗಳು ನಿಮ್ಮ ದೇಹಕ್ಕೆ ಸಿಕ್ಕಿದಂತೆ ಆಗಿ, ಚರ್ಮದ ಗುಣಮಟ್ಟವನ್ನು ವೇಗವಾಗಿ ಹೆಚ್ಚು ಮಾಡುತ್ತವೆ.

* ಅತ್ಯುತ್ತಮವಾದ ಚರ್ಮದ ಹೊಳಪಿಗೆ ಅನುಕೂಲವಾಗುವಂತೆ ಸುಮಾರು 15 ನಿಮಿಷಗಳ ಕಾಲ ಓಟ್ಸ್ ಗಳನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಆನಂತರ ಜೇನುತುಪ್ಪ ಸೇರಿಸಿ ಈ ಮಿಶ್ರಣವನ್ನು ಮುಖದ ಮೇಲೆ ಎಲ್ಲಾ ಕಡೆ ಅನ್ವಯಿಸಿ ಸ್ವಲ್ಪ ಹೊತ್ತು ಕಳೆದ ನಂತರ ಒಣಗಲು ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

* ಮಲಗುವ ಮುಂಚೆ ಒಂದು ಲೋಟ ನಿಂಬೆ ಹಣ್ಣಿನ ಪಾನೀಯವನ್ನು ಕುಡಿದು ಮಲಗುವುದು ತುಂಬಾ ಒಳ್ಳೆಯದು. ಇದು ಒಳಭಾಗದಿಂದ ನಿಮ್ಮ ದೇಹವನ್ನು ಸ್ವಚ್ಛಮಾಡುವುದು ಮಾತ್ರವಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

Author:

...
Keerthana J

Copy Editor

prajashakthi tv

share
No Reviews