ಚಿಕ್ಕಬಳ್ಳಾಪುರ :
ಚಿಕ್ಕಬಳ್ಳಾಪುರದ ಅಮಾನಿಕೆರೆಯಲ್ಲಿ ಏಕಾಏಕಿ ಮೀನುಗಳ ಮಾರಣಹೋಮ ಆಗ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ದೊಡ್ಡ ಕೆರೆಯಾಗಿರೋ ಅಮಾನಿಕೆರೆಯಲ್ಲಿ ಒಂದು ಕೆ.ಜಿ, ಎರಡು ಕೆ.ಜಿ ಗಾತ್ರದ ಮೀನುಗಳು ಸಾವನ್ನಪ್ಪಿದ್ದು ಕೆರೆಯಲ್ಲಿ ಸತ್ತಿರುವ ಮೀನುಗಳು ತೇಲುತ್ತಿವೆ. ಮೀನುಗಳು ಮಾರಣಹೋಮ ಆಗ್ತಾ ಇದ್ರು ಕೂಡ ಮೀನುಗಾರಿಕೆ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಅಮಾನಿಕೆರೆಗೆ ಕಲುಷಿತ ನೀರು ಬಿಡ್ತಾ ಇರೋದರಿಂದ, ಕೆರೆಯಲ್ಲಿ ಸಾರಜನಕ ಅಂಶ ಹೆಚ್ಚಾಗುತ್ತಿದೆ, ಕೆರೆ ಪೂರ್ತಿ ಪಾಚಿ ಕಟ್ಟುತ್ತಿದೆ. ಇದರಿಂದ ಆಮ್ಲಜನಕ ಕಡಿಮೆಯಾಗಿ ಮೀನುಗಳ ಸಾವಿಗೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡ್ತಾ ಇದ್ದರೂ ಕೂಡ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ತಾ ಇಲ್ಲ ಎಂದು ಆಕ್ರೋಶ ಕೇಳಿ ಬಂದಿದೆ. ಕಲುಷಿತ ನೀರನ್ನು ಶುದ್ಧೀಕರಣ ಮಾಡಿ ಕೆರೆಗೆ ನೀರು ಬಿಡದಿರೋದರಿಂದ ಕೆರೆಯ ನೀರು ಕಲುಷಿತವಾಗ್ತಿದೆ. ಇದರಿಂದ ಕೆರೆಯಲ್ಲಿರೋ ಮೀನುಗಳು ಸಾಯುತ್ತಿವೆ, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಮೀನುಗಳ ಮಾರಣಹೋಮಕ್ಕೆ ಬ್ರೇಕ್ ಹಾಕಬೇಕಿದೆ.