ಬೆಂಗಳೂರು : ಬೃಹತ್ ನಿರೀಕ್ಷೆ ಮೂಡಿಸಿರುವ ‘ಜೂನಿಯರ್’ ಚಿತ್ರದಿಂದ ಇಂದು ಮೊದಲ ಹಾಡು ರಿಲೀಸ್ ಆಗಿದೆ. ಜನಾರ್ಧನ ರೆಡ್ಡಿ ಮಗ ಕಿರೀಟಿ ನಾಯಕನಾಗಿ ನಟಿಸಿದ್ದು, ಕಿರೀಟಿಗೆ ಜೋಡಿಯಾಗಿ ಶ್ರೀಲೀಲಾ ಕಾಣಿಸಿಕೊಂಡಿದ್ದಾರೆ. ಕಿಸ್ಸಿಕ್ ಬೆಡಗಿ ಶ್ರೀಲೀಲಾ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಧ್ಯ ಭಾರಿ ಬೇಡಿಕೆಯ ನಟಿಯಾಗಿದ್ದು, ಇದೀಗ 3 ವರ್ಷಗಳ ನಂತರ ಶ್ರೀಲೀಲಾ ಮತ್ತೆ ಕನ್ನಡ ಚಿತ್ರರಂಗಕ್ಕೆ ಜೂನಿಯರ್ ಸಿನಿಮಾ ಮೂಲಕ ಎಂಟ್ರಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಜೂನಿಯರ್ ಸಿನಿಮಾದ ಮೊದಲ ಹಾಡನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯ್ತು. ಈ ಹಾಡು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ರಿಲೀಸ್ ಆಗಿದೆ, ಇನ್ನು ಬಿಡುಗಡೆಯಾದ ತಕ್ಷಣವೇ ಅಭಿಮಾನಿಗಳಿಂದ ಈ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಸಿನಿಮಾ ಜುಲೈ 18 ರಂದು ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್ ಮತ್ತು ಸಾಂಗ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಮಾಯಾಬಜಾರ್’ ಸಿನಿಮಾ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ‘ಜೂನಿಯರ್’ ಸಿನಿಮಾ ಮೂಡಿ ಬರ್ತಿದ್ದು. ಖ್ಯಾತ ನಿರ್ಮಾಣ ಸಂಸ್ಥೆ ವರಾಹಿ ಫಿಲ್ಮಂ ಪ್ರೊಡಕ್ಷನ್ ಬಂಡವಾಳ ಹೂಡಿದ್ದು, ಚಿತ್ರದಲ್ಲಿ ಬಹುದೊಡ್ಡ ಸ್ಟಾರ್ ತಾರಾಗಣವಿದೆ. ಇದೊಂದು ಭರ್ಜರಿ ಪ್ಯಾನ್ ಇಂಡಿಯಾ ಎಂಟರ್‌ಟೈನ್‌ಮೆಂಟ್ ಆಗಲಿದೆ ಎಂಬ ನಿರೀಕ್ಷೆ ಇದೆ.