BIGGBOSS KANNADA: ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿಗಳ ಮೇಲೆ ಎಫ್‌ಐಆರ್‌

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​​ಬಾಸ್​ ಮೂಲಕ ಆನೆ ಅಂತಲೇ ಫೇಮಸ್​ ಆಗಿದ್ದ ವಿನಯ್​ ಗೌಡ ಹಾಗೂ ರಜತ್​ ಬುಜ್ಜಿ ಮೇಲೆ ಎಫ್​ಐಆರ್​ ಆಗಿದೆ.

ವಿನಯ್ ಗೌಡ ಹಾಗೂ ರಜತ್ ಇತ್ತೀಚೆಗೆ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಾರೆ. ಈಗ ಅದೇ ವಿಚಾರ ಸಂಕಷ್ಟ ತಂದಿದೆ. ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಹಾಗೂ ರಜತ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆ ಅಡಿ‌ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ಹಾಕಲಾಗಿದೆ.  ಸಾರ್ವಜನಿಕ ಸ್ಥಳದಲಿ, ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರಿಲ್ಸ್ ಮಾಡಿದ್ದೇ ಇವರಿಗೆ ಸಮಸ್ಯೆ ತಂದಿದೆ. ರಜತ್ ಅವರು ಈ ವಿಡಿಯೋನ ಅಪ್​ಲೋಡ್ ಮಾಡಿದ್ದರು.

ರಜತ್ ಇನ್ಟಾಗ್ರಾಂ ಅಕೌಂಟ್‌ನಲ್ಲಿ ರೀಲ್ಸ್ ಅಪ್ಲೋಡ್ ಮಾಡಲಾಗಿದೆ. ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಲಾಗಿದ್ದು ಕಾನೂನು ಬಾಹಿರವಾಗಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದು ಸಮಸ್ಯೆಗೆ ಕಾರಣವಾಗಿದೆ. ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗವಾಗುವ ಸ್ಥಿತಿ ಉಂಟು ಮಾಡಿದ್ದು, ನಿಷೇಧಿತ ಮಾರಕಾಸ್ತ್ರ ಹಿಡಿದುಕೊಂಡು ರೀಲ್ಸ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೂ ಪೊಲೀಸರಿಗೆ ನೀಡಿದ ಎಫ್​ಐಆರ್​ನಲ್ಲಿ ವಿನಯ್​ ಗೌಡ ಅವರು, ಬೆಂಗಳೂರಿನ ನಾಗರಭಾವಿಯ ಅಕ್ಷಯ್ ಸ್ಟುಡಿಯೋದಲ್ಲಿ, ಖಾಸಗಿ ರಿಯಾಲಿಟಿ ಶೋಗೆ ಸಂಬಂಧಪಟ್ಟಂತೆ ಈ ವಿಡಿಯೋವನ್ನು ಶೂಟ್​ ಮಾಡಿದ್ದೇವೆ. ಅಲ್ಲಿ ನಾನು ಪುಷ್ಪಾ ಪಾತ್ರವನ್ನು ಮತ್ತು ರಜತ್ ಕಿಶನ್ ದರ್ಶನ್ ಪಾತ್ರವನ್ನು ನಿರ್ವಹಿಸಿದ್ದಾರೆ.ಮನರಂಜನೆ ಮತ್ತು ಪ್ರಚಾರದ ಉದ್ದೇಶಗಳಿಗಾಗಿ ವಿಡಿಯೋವನ್ನು ಚಿತ್ರೀಕರಣ ಮಾಡಿದ್ದೇವೆ. ಹೀಗಾಗಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 

Author:

...
Sub Editor

ManyaSoft Admin

share
No Reviews