BANGALORE : ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ | ಇಬ್ಬರು ಯುವಕರು ಬಲಿ

BANGALORE : ಬೆಂಗಳೂರು ಮೈಸೂರು ರಸ್ತೆಯ MARKET FLYOVER ಬಳಿ ತಡರಾತ್ರಿ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ [BIKE ACCIDNT] ಇಬ್ಬರು ಯುವಕರು ದುರ್ಮರಣಕ್ಕೆ ಒಳಗಾದ ದುಃಖದ ಘಟನೆ ನಡೆದಿದೆ. ಎರಡು ಬೈಕ್​ಗಳ ನಡುವೆ ಅಪಘಾತವಾದ ಪರಿಣಾಮ ಆಕಾಶ್ [AKASH] ಹಾಗೂ ಅಫ್ಜಲ್ [AFZAL] ಮೃತಪಟ್ಟಿದ್ದಾರೆ.

ಮೃತ ಆಕಾಶ್​ ಕೆ.ಪಿ ಅಗ್ರಹಾರ‌ ನಿವಾಸಿಯಾಗಿದ್ದ, ಗ್ರೈಂಡರ್ ಮೆಕಾನಿಕ್ ಆಗಿ ಕೆಲಸ‌ ಮಾಡುತ್ತಿದ್ದ. ಆದ್ರೆ ಸ್ನೇಹಿತ ಮಣಿ ಜೊತೆ ರಾತ್ರಿ ಊಟ ಮಾಡಲು ಬಂದಿದ್ದ. ಇನ್ನೂ ಮತ್ತೊಬ್ಬ ಬೈಕ್​ ಸವಾರ ಅಫ್ಜಲ್  ಮಂಗಳೂರು ನಿವಾಸಿಯಾಗಿದ್ದ. ವಿಜಯನಗರದಲ್ಲಿ ವಾಸವಾಗಿದ್ದ. ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ. ಸ್ನೇಹಿತ ಆಶಿಮ್‌ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಗ ಮುಂದೆ ಹೋಗ್ತಿದ್ದ ಎಲೆಕ್ಟ್ರಿಕ್​ ಬೈಕ್​ಗೆ ಹಿಂಬದಿಯಿಂದ ಬಂದ ಎಕ್ಸ್ ಪಲ್ಸ್ ಬೈಕ್ ಗುದ್ದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಜೀವಬಿಟ್ಟಿದ್ದಾರೆ.

ಈ ಭೀಕರ ಅಪಘಾತಕ್ಕೆ ಸಂಬಂಧಪಟ್ಟಂತೆ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆ ದಿದ್ದು, ಅಪಘಾತದ ಸ್ಪಷ್ಟ ಕಾರಣ ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

Author:

...
Keerthana J

Copy Editor

prajashakthi tv

share
No Reviews