ಶಿರಾ : ಪೊದೆಯಲ್ಲಿ ಸಿಕ್ಕ ನವಜಾತ ಶಿಶು ಪ್ರಕರಣಕ್ಕೆ ರೋಚಕ ಟ್ವಿಸ್ಟ್

ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ ಶಿರಾ
ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ ಶಿರಾ
ತುಮಕೂರು

ಶಿರಾ:

ಶಿರಾ ತಾಲೂಕಿನ ಮಾಟನಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಪಾಪಿ ತಾಯಿಯೊಬ್ಬಳು ಹೆರಿಗೆಯಾದ ಬಳಿಕ ಹೆಣ್ಣು ಮಗು ಎಂದು ಬಟ್ಟೆ ಹಾಗೂ ಕವರ್‌ನಲ್ಲಿ ಸುತ್ತಿ ಪೊದೆಯಲ್ಲಿ ಎಸೆದು ಹೋಗಿದ್ದಳು. ಮಗು ಚೀರಾಟ ಕಂಡ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿ ಆರೈಕೆ ಮಾಡಿದ್ದರು. ಅಲ್ಲದೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಲಾಗಿತ್ತು. ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಗುವಿನ ತಾಯಿ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.

ಎರಡು ದಿನಗಳ ಬಳಿಕ ಪೊಲೀಸರು ನವಜಾತ ಹೆಣ್ಣು ಮಗುವಿನ ತಾಯಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪಾಪಿ ತಾಯಿ ಮಾಟನಹಳ್ಳಿ ಗ್ರಾಮದವಳಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆ ಹಾಗೂ ಆಕೆಯ ಮೊದಲ ಮಗು ಸಹ ಹೆಣ್ಣಾಗಿದ್ದು ಸಾಕಲು ಕಷ್ಟವಾಗಿದ್ದು,  ಹೆರಿಗೆಯಾದ ಬಳಿಕ ಮಗುವನ್ನು ಪೊದೆಯಲ್ಲಿ ಎಸೆದು ಹೋಗಿದ್ದಾಳೆ ಎಂದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ಪೊಲೀಸರ ಕಾರ್ಯವೈಖರಿಯಿಂದ ತಾಯಿ- ಮಗು ಒಂದಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Author:

share
No Reviews