ಸಿನಿಮಾ:
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇಡಿ) ಏಪ್ರಿಲ್ 27ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಟಾಲಿವುಡ್ ಹ್ಯಾಂಡ್ಸಮ್ ಅಂಡ್ ಸೂಪರ್ ಸ್ಟಾರ್ ಈಗ ಇಡಿ ಸಂಕಷ್ಟ ಎದುರಿಸಬೇಕಾಗಿದೆ. ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗಳಾದ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನಾ ಗ್ರೂಪ್ ಈ ಜಾಹೀರಾತು ಕಂಪನಿಗಳೊಂದಿಗೆ ಜಾಹೀರಾತಿನಲ್ಲಿ ನಟಿಸಲು ಮಹೇಶ್ ಬಾಬು 5.9 ಕೋಟಿ ಸಂಭಾವನೆಯನ್ನು ಪಡೆದಿದ್ರು ಎನ್ನಲಾಗಿದೆ. ಆದರೆ ಈ ಪೈಕಿ 3.4 ಕೋಟಿ ಚೆಕ್ ಮೂಲಕ ಪಡೆದ್ರೆ ಉಳಿದ 2.5 ಕೋಟಿ ರೂ ನಗದು ಮೂಲಕ ಪಾವತಿಸಲಾಗಿದೆ ಅನ್ನೋ ಅನುಮಾನದ ಆಧಾರದ ಮೇಲೆ ಇಡಿ ಮಹೇಶ್ ಬಾಬು ಸಮನ್ಸ್ ಜಾರಿ ಮಾಡಿ ಶಾಕ್ ಕೊಟ್ಟಿದೆ.
ಇನ್ನು ಯಾವುದೇ ಒಬ್ಬ ವ್ಯಕ್ತಿ ಒಂದು ವಹಿವಾಟಿಗೆ ಇಲ್ಲವೇ ಒಂದು ಕಾರ್ಯಕ್ರಮಕ್ಕೆ ಸಂಬಂಧಪಟ್ಟ ವ್ಯಕ್ತಿಯಿಂದ ದಿನದಲ್ಲಿ 2 ಲಕ್ಷಕ್ಕಿಂದತ ಹೆಚ್ಚಿನ ಹಣವನ್ನು ಪಡೆಯಬಾರದು ಅನ್ನೋ ಕಾನೂನು ಇದೆ. ಆದರೆ ಮಹೇಶ್ ಬಾಬು ಅವ್ರು ಈ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಇಡಿ ಸಮನ್ಸ್ ಜಾರಿ ಮಾಡಿದೆ. ಇದೇ 27ಕ್ಕೆ ಇಡಿ ವಿಚಾರಣಗೆ ಹಾಜರಾಗುವಂತೆ ಸೂಚಿಸಿದೆ.