ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ಕೇವಲ 125 ರನ್ ಗಳಿಸಿತು. ಈ ಸೋಲಿನೊಂದಿಗೆ ಆರ್‌ಸಿಬಿ ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಹೊಸ್ತಿನಲ್ಲಿದ್ದ ಆರ್‌ಸಿಬಿ ಗರ್ಲ್ಸ್, ಈಗ ಹ್ಯಾಟ್ರಿಕ್ ಸೋಲನ್ನು ಅನುಭವಿಸಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಮತ್ತು ಗುಜರಾತ್ ಪಂದ್ಯದಲ್ಲಿ ಗುಜರಾತ್ ಟಾಸ್ ಗೆದ್ದು ಆರ್‌ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಓಪನರ್ಸ್ 25 ರನ್ ಒಳಗೆ ನಾಯಕಿ ಸ್ಮೃತಿ ಮಂದಾನ, ವ್ಯಾಟ್-ಹಾಡ್ಜ್, ಪೆರ್ರಿ ಔಟ್ ಆಗಿದ್ದು ತಂಡಕ್ಕೆ ಭಾರೀ ಹಿನ್ನಡೆ ಆಯಿತು. ಮಧ್ಯಮ ಕ್ರಮಾಂಕದಲ್ಲಿ ಹಾಗೂ 7, 8 ಸ್ಥಾನದಲ್ಲಿ ರನ್ ಬಂದಿದ್ದರಿಂದ ಆರ್‌ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗೆ 125 ರನ್ ಗಳಿಸಿತು.
ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡ ಇನ್ನು 21 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಆರ್‌ಸಿಬಿ, ತವರಿನಲ್ಲಿ ಸತತ ಮೂರು ಪಂದ್ಯಗಳನ್ನು ಸೋತಿದೆ. 16.3 ಓವರ್ನಲ್ಲಿ 4 ವಿಕೆಟ್ಗೆ 126 ರನ್ ಗಳಿಸುವ ಮೂಲಕ ಗುಜರಾತ್ ಗೆಲುವು ಸಾಧಿಸಿತು. ಇದುವರೆಗೆ ಗುಜರಾತ್ ಡಬ್ಲುಪಿಎಲ್ನಲ್ಲಿ ಒಟ್ಟು 6 ಪಂದ್ಯಗಳನ್ನು ಗೆದ್ದಿದ್ದು ಇದರಲ್ಲಿ 3 ಪಂದ್ಯಗಳನ್ನು ಆರ್‌ಸಿಬಿ ವಿರುದ್ಧ ಗೆದ್ದಿರುವುದು ಅಚ್ಚರಿ ಮೂಡಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟನ್ಸ್ ಪ್ಲೇಯಾಫ್ ರೇಸ್ಗೆ ಮರಳಿದೆ.