ಬೆಳಗಾವಿ ಕುಂದಾವನ್ನು ಮನೆಯಲ್ಲೇ ಸರಳವಾಗಿ ಮಾಡುವ ವಿಧಾನ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಬೆಳಗಾವಿ ಕುಂದವು ಕರ್ನಾಟಕದ ಬೆಳಗಾವಿ ನಗರದಲ್ಲಿ ತಯಾರಿಸಲಾಗುವ ಪ್ರಸಿದ್ದ ತಿನಿಸಾಗಿದೆ. ಬೆಳಗಾವಿ ಕುಂದವು ಬೆಳಗಾವಿಯ ಅತ್ಯಂತ ಜನಪ್ರಿಯ ಸಿಹಿ ಪಾಕವಿಧಾನವಾಗಿದೆ.

ಬೆಳಗಾವಿ ಕುಂದ ಮಾಡುವ ವಿಧಾನವೆಂದರೆ ಹಾಲು ಅಥವಾ ಖೋವಾ ಮತ್ತು ಸಕ್ಕರೆ ಬೆಳಗಾವಿ ಕುಂದದ ಮುಖ್ಯ ಪದಾರ್ಥಗಳಾಗಿವೆ. ದಪ್ಪ ಪ್ಯಾನ್‌ ತೆಗೆದುಕೊಂಡು ಅದಕ್ಕೆ ಹಾಲನ್ನು ಹಾಕಿ ಅದರಲ್ಲಿರುವ ನೀರಿನ ಅಂಶವನ್ನು ಕಳೆದುಕೊಳ್ಳುವವರೆಗೆ ಕುದಿಸಲಾಗುತ್ತದೆ. ನಂತರ ಸಕ್ಕರೆ ಸೇರಿಸಿ ಚೆನ್ನಾಗಿ ಬೆರೆಸಿ ಮಿಶ್ರ ಮಾಡಲಾಗುತ್ತದೆ. ಏಲಕ್ಕಿ ಪುಡಿ ಮತ್ತು ಒಣ ಹಣ್ಣುಗಳನ್ನು ಹಾಕಲಾಗುತ್ತದೆ, ಇದನ್ನು ಹೆಚ್ಚು ರುಚಿ ಮತ್ತು ಪರಿಮಳಕ್ಕಾಗಿ ಸೇರಿಸಲಾಗುತ್ತದೆ. ಪ್ಯಾನ್ ನಿಂದ ತೆಗೆದು ತಣ್ಣಗಾಗಲು ಬಿಡಿ, ನಂತರ ಗೋಡಂಬಿ ಚೂರುಗಳಿಂದ ಅಲಂಕರಿಸಿ. ಬಳಿಕ ಬೆಳಗಾವಿ ಕುಂದಾ ಸವಿಯಲು ಸಿದ್ದ

ಬೆಳಗಾವಿ ಕುಂದವನ್ನು ತಂಪಾದ ಮತ್ತು ಶುಷ್ಕ ಸ್ಥಳದಲ್ಲಿ ಸಂಗ್ರಹಿಸಬೇಕು ಆದರೆ ದೀರ್ಘಾವಧಿಯ ಶೈತ್ಯೀಕರಣ ಬೆಳಗಾವಿ ಕುಂದದ ಗುಣಮಟ್ಟಕ್ಕೆ ಕುಂದು ತರುತ್ತದೆ. ಅದ್ದೂರಿ ಊಟದ ನಂತರ ಕುಂದ ತಿನ್ನುವುದು ಒಂದು ಅನನ್ಯ ಅನುಭವ ನೀಡುತ್ತದೆ. ಬೆಳಗಾವಿ ಭೇಟಿ ನೀಡುವ ಪ್ರಯಾಣಿಕರು, ಸ್ನೇಹಿತರು ಮತ್ತು ಕುಟುಂಬದವರ ನಡುವೆ ವಿತರಿಸಲು ಸಾಕಷ್ಟು ಬೆಳಗಾವಿ ಕುಂದವನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ.

ಬೆಳಗಾವಿ ಕುಂದವನ್ನು ಖರೀದಿಸಲು ಉತ್ತಮ ಸ್ಥಳವೆಂದರೆ ಉತ್ತರ ಕರ್ನಾಟಕದ ಬೆಳಗಾವಿ ನಗರ. ಬೆಳಗಾವಿ ನಗರವು ಕುಂದವನ್ನು ತಯಾರಿಸುವ ಮತ್ತು ಮಾರಾಟ ಮಾಡುವ 200ಕ್ಕೂ ಹೆಚ್ಚು ಸಿಹಿ ಅಂಗಡಿಗಳನ್ನು ಹೊಂದಿದೆ. ಕರ್ನಾಟಕದ ಎಲ್ಲಾ ನಗರಗಳ ಆಯ್ದ ಬೇಕರಿಗಳಲ್ಲಿ ಬೆಳಗಾವಿ ಕುಂದ ಲಭ್ಯವಿದೆ.

 

Author:

...
Editor

ManyaSoft Admin

Ads in Post
share
No Reviews