ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಳ್ಳಿ ಪಾಪ್‌ ಕಾರ್ನ್‌ ಚಿಕನ್

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಆರೋಗ್ಯ-ಜೀವನ ಶೈಲಿ

ಪ್ರತಿಯೊಬ್ಬರೂ ಪಾಪ್‌ ಕಾರ್ನ್‌ ಚಿಕನ್‌ ಅನ್ನು ಇಷ್ಟಪಡುತ್ತಾರೆ. ಮನೆಯಲ್ಲಿಯೇ ಸಿಂಪಲ್‌ ಆಗಿ ಗರಿಗರಿಯಾದ, ರುಚಿಕರವಾದ ಪಾಪ್‌ ಕಾರ್ನ್‌ ಚಿಕನ್‌ ಅನ್ನು ತಯಾರಿಸಿಕೊಳ್ಳಲು ಬೇಕಾಗುವ ಪದಾರ್ಥಗಳೆಂದರೆ

ಬೋನ್ ಲೆಸ್ ಚಿಕನ್- 1 ಕೆಜಿ, ಮೈದಾ- 5 ಚಮಚ , ಉಪ್ಪು ಅರ್ಧ ಚಮಚ, ಈರುಳ್ಳಿ ಪುಡಿ ಒಂದು ಚಮಚ, ಶುಂಠಿ ಪುಡಿ ಒಂದು ಚಮಚ, ಬೆಳ್ಳುಳ್ಳಿ ಪುಡಿ ಒಂದು ಚಮಚ, ಅಚ್ಚ ಖಾರದ ಪುಡಿ ಒಂದು ಚಮಚ, ಮೊಸರು ಒಂದು ಬಟ್ಟಲು, ಕಾರ್ನ್‌ ಪ್ಲೇಕ್ಸ್‌ ಎರಡು ಬಟ್ಟಲು ಮತ್ತು ಅಗತ್ಯವಿದ್ದಷ್ಟು ಅಡುಗೆ ಎಣ್ಣೆ

ಪಾಪ್ ಕಾರ್ನ್‌ ಚಿಕನ್ ಮಾಡುವ ವಿಧಾನ: 

ಮೊದಲಿಗೆ ಚಿಕನ್ ಅನ್ನು ಒಂದೊಂದು ಇಂಚಿನಷ್ಟು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ನಂತರ ಒಂದು ಬಟ್ಟಲಿನಲ್ಲಿ ಮೈದಾ ಹಿಟ್ಟು, ಉಪ್ಪು, ಈರುಳ್ಳಿ ಪುಡಿ, ಶುಂಠಿ ಹಾಗೂ ಬೆಳ್ಳುಳ್ಳಿ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ. ಮತ್ತೊಂದು ಬಟ್ಟಲಿನಲ್ಲಿ ಮೊಸರನ್ನು ಹಾಕಿ. ತಟ್ಟೆಯಲ್ಲಿ ಕಾರ್ನ್‌ಫ್ಲೇಕ್ಸ್ ಅನ್ನು ಪುಡಿ ಮಾಡಿ ಇಟ್ಟಿರಿ. ನಂತರ ಚಿಕನ್ ತುಂಡುಗಳನ್ನು ಮೈದಾ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಪೂರ್ತಿಯಾಗಿ ಕೋಟ್ ಮಾಡಿ. ಒಂದೊಂದೇ ಚಿಕನ್ ತುಂಡುಗಳನ್ನು ಮೊಸರಿನಲ್ಲಿ ಅದ್ದಿ, ತೆಗೆಯಿರಿ. ಹೆಚ್ಚುವರಿ ಮೊಸರು ಚಿಕನ್ ತುಂಡಿನಿಂದ ಇಳಿದು ಹೋಗುವಂತೆ ಬಿಡಿ. ನಂತರ ಕಾರ್ನ್‌ಫ್ಲೇಕ್ಸ್ ಪುಡಿಯಲ್ಲಿ ಚಿಕನ್‌ನ ಒಂದೊಂದೇ ತುಂಡನ್ನು ಹಾಕಿ ಉರುಳಿಸಿ ಕೋಟ್ ಮಾಡಿ. ಚಿಕನ್ ತುಂಡುಗಳನ್ನು ಬ್ಯಾಚ್‌ಗಳಲ್ಲಿ ಬಿಸಿ ಎಣ್ಣೆಯಲ್ಲಿ ಬಿಟ್ಟು ಡೀಪ್ ಫ್ರೈ ಮಾಡಿ. ಚಿಕನ್ ಚೆನ್ನಾಗಿ ಬೆಂದು, ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹರಡಿ. ಇದೀಗ ರುಚಿಕರವಾದ ಚಿಕನ್ ಪಾಪ್‌ಕಾರ್ನ್ ಸವಿಯಲು ಸಿದ್ಧ.

 

Author:

...
Editor

ManyaSoft Admin

Ads in Post
share
No Reviews