ತುಮಕೂರು : ದೂರು ನೀಡಲು ಬಂದ ಮಹಿಳೆಗೆ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಡಿವೈಎಸ್ಪಿ ರಾಮಚಂದ್ರಪ್ಪನನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಿನ್ನೆ ರಾಮಚಂದ್ರಪ್ಪ ವಿರುದ್ಧ ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಾಮಚಂದ್ರಪ್ಪನನ್ನು ಬಂಧಿಸಿದ ಪೊಲೀಸರು, ಬೆಳಗ್ಗೆ ಸ್ಥಳ ಮಹಜರ್ ನಡೆಸಿದ್ದರು,
ಬಳಿಕ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಮಧುಗಿರಿ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯದ ಎದುರು ಹಾಜರು ಪಡಿಸಿದ್ರು. ಎರಡು ಕಡೆ ವಾದ ಆಲಿಸಿದ ನ್ಯಾಯಾಧೀಶಿರು ಡಿವೈಎಸ್ ಪಿ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ಆದೇಶಿದರು.
ನಾಳೆ ಒಂದು ದಿನ ಮಧುಗಿರಿ ಉಪಕಾರಗೃಹದಲ್ಲಿರುವಂತೆ ಆದೇಶ ನೀಡಿದ ಜಡ್ಜ್ , ಇನ್ನುಳಿದ 13 ದಿನಗಳ ಕಾಲ ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಇಡುವಂತೆ ಆದೇಶಿಸಿದ್ದಾರೆ.