CRICKET : RCBಗೆ ಇಂದು ಡಬಲ್ ಸಂಭ್ರಮ

ROYAL CHALLENGERS BANGALURU : ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ತನ್ನ ಭಕ್ತರಿಗೆ ಬಹುದಿನದ ಕನಸು ಈಡೇರಿಸಿಕೊಟ್ಟಿದೆ. 9 ವರ್ಷಗಳ ನಂತರ RCB ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು, ಪಂಜಾಬ್ ಕಿಂಗ್ಸ್‌ ವಿರುದ್ಧದ 8 ವಿಕೆಟ್ ಜಯದೊಂದಿಗೆ ಐತಿಹಾಸಿಕ ಸಾಧನೆ ದಾಖಲಿಸಿದೆ.

ಆರ್‌ಸಿಬಿ  ಜೂನ್ 3ರಂದು ನಡೆಯುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಹೊರಾಟ ನಡೆಸಲಿದೆ. ಪಂಜಾಬ್ ವಿರುದ್ಧದ ಭರ್ಜರಿ ಗೆಲುವಿನಿಂದ ಸ್ಫೂರ್ತಿಗೊಂಡಿರುವ ತಂಡ ಈಗಾಗಲೇ ಅಹಮದಾಬಾದ್‌ಗೆ ತೆರಳಿದ್ದು, ಫೈನಲ್‌ಗೆ ತಯಾರಿ ಆರಂಭಿಸಿದೆ.

ಒಂದು ಕಡೆ ಫೈನಲ್ ಪ್ರವೇಶದ ಸಂಭ್ರಮ, ಇನ್ನೊಂದು ಕಡೆ ಜನ್ಮದಿನದ ಆಚರಣೆಗಳು ಜೋರಾಗಿದೆ.  RCB ನಾಯಕ ರಜತ್ ಪಾಟಿದಾರ್ ಇಂದು ತನ್ನ 32ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇನ್ನು, ಮಾಜಿ ಆಟಗಾರ ಹಾಗೂ ಪ್ರಸ್ತುತ ಟೀಂ ಮೆಂಟರ್ ದಿನೇಶ್ ಕಾರ್ತಿಕ್, ಇಂದು ತಮ್ಮ 40ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ.

ಇನ್ನು ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ, ಈ ಡಬಲ್ ಸಂಭ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ಕ್ಯಾಪ್ಟನ್ ಹಾಗೂ ಮೆಂಟರ್ ಇಬ್ಬರೂ ಈ ವಿಶೇಷ ದಿನವನ್ನು ನಮ್ಮೊಂದಿಗೆ ಕಳೆಯುತ್ತಿದ್ದಾರೆ – ಬಿಗ್ ಟ್ರೀಟ್ ಉಂಟಾಗಬಹುದು!" ಎಂದು ಹೇಳಿದೆ.

ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ರಜತ್ ಪಾಟಿದಾರ್ ನಾಯಕತ್ವ ವಹಿಸಿಕೊಂಡು ತಮ್ಮ ಶಾಂತ, ತಾಳ್ಮೆಯ ನಾಯಕತ್ವದ ಮೂಲಕ ಗಮನ ಸೆಳೆದಿದ್ದಾರೆ. ಇತ್ತ, ದಿನೇಶ್ ಕಾರ್ತಿಕ್, ಕಳೆದ ಆವೃತ್ತಿಯಲ್ಲಿ ಆಟಗಾರನಾಗಿ ಆಡಿದ್ದವರು, ಈಗ ಮೆಂಟರ್ ಆಗಿ ತಂಡದ ಯಶಸ್ಸಿಗೆ ಶಕ್ತಿಶಾಲಿ ಸಹಾಯಧಾರರಾಗಿದ್ದಾರೆ.

Author:

...
Keerthana J

Copy Editor

prajashakthi tv

share
No Reviews