ಉತ್ತರಾಖಾಂಡ : ವಿಶ್ವವಿಖ್ಯಾತ ಕೇದಾರನಾಥ ದೇಗುಲದ ಬಾಗಿಲು ಮೇ 2 ಕ್ಕೆ ಓಪನ್

ಉತ್ತರಾಖಂಡ :

ಪ್ರತಿ ವರ್ಷ ಚಳಿಗಾಲದಲ್ಲಿ ಮುಚ್ಚುವ ವಿಶ್ವವಿಖ್ಯಾತ ಕೇದಾರನಾಥ ದೇಗುಲದ ಬಾಗಿಲು ಮೇ 2 ಕ್ಕೆ ತೆರೆಯಲಿದ್ದು ಭಕ್ತರಿಗೆ ದರ್ಶನ ಸಿಗಲಿದೆ. ಈ ಹಿನ್ನಲೆಯಲ್ಲಿ ಪಂಚಮುಖಿ ಡೋಲಿಯು ಏಪ್ರಿಲ್‌ 28 ರಂದು ಓಂಕಾರೇಶ್ವರ ದೇವಾಲಯದಿಂದ ಕೇದಾರನಾಥ ಧಾಮದತ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ಭಾರತೀಯ ಸೇನಾ ಬ್ಯಾಂಡ್‌ನ ಭಕ್ತಿ ಗೀತೆಗಳೊಂದಿಗೆ ನಡೆಯಿತು. ಇದೇ ವೇಳೆ ಕೇದಾರನಾಥನ ಪಂಚಮುಖಿ ಉತ್ಸವ ಮೂರ್ತಿಯನ್ನು ಕೇದಾರನಾಥ ರಾವಲ್ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ನೇತೃತ್ವದಲ್ಲಿ ಬೀಳ್ಗೊಡಲಾಯಿತು.

ಭಕ್ತರು 'ಓಂ ನಮಃ ಶಿವಾಯ' ಮತ್ತು 'ಜೈ ಬಾಬಾ ಕೇದಾರ' ಘೋಷಣೆಗಳೊಂದಿಗೆ ಡೋಲಿಯನ್ನು ಮೆರವಣಿಗೆ ಮೂಲಕ ಕೇದಾರನಾಥ ಧಾಮದತ್ತ ಹೊರಟಿತು. ಪಂಚ-ಸ್ನಾನದ ಪಂಚಮುಖಿ ವಿಗ್ರಹವನ್ನು ಹೂವುಗಳಿಂದ ಅಲಂಕರಿಸಲಾಗಿತ್ತು.  ಸೇನಾ ವಾದ್ಯ ತಂಡದ ಭಕ್ತಿ ಗೀತೆಗಳ ಮೊಳಗಿಸುವಿಕೆಯೊಂದಿಗೆ, ದೇವಾಲಯ ಸಮಿತಿಯ ಅರ್ಚಕರು, ವೇದಪತಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ತಮ್ಮ ಹೆಗಲ ಮೇಲೆ ಪಂಚಮುಖಿ ಡೋಲಿಯನ್ನು ಹೊತ್ತು ಭಕ್ತಿ ಮೆರೆದರು.

ಕೋಟ್ಯಂತರ ಭಕ್ತರು ಡೋಲಿಯನ್ನು ಸ್ವಾಗತಿಸಲು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದು ವಿಶೇಷವಾಗಿತ್ತು. ಸಂಪ್ರದಾಯದಂತೆ ಡೋಲಿ ಮೆರವಣಿಗೆಗೂ ಮುನ್ನ ಭಾನುವಾರ, ಭಗವಾನ್ ಭೈರವನಾಥನನ್ನು ಪೂಜೆ ಮಾಡುವ ಪದ್ಧತಿ ಇದೆ. ಆದಾದ ನಂತರ ಪಂಚಮುಖಿ ಡೋಲಿಯು ಓಂಕಾರೇಶ್ವರ ದೇವಸ್ಥಾನ ಉಖಿಮಠದಿಂದ ಕೇದಾರನಾಥ ಧಾಮಕ್ಕೆ ತೆರಳುವುದು ವಾಡಿಕೆ.

ನಾಲ್ಕು ದಿನಗಳ ಕಾಲ್ನಡಿಗೆಯ ಈ ಮೆರವಣಿಗೆಯು ಗುಪ್ತಕಾಶಿ, ಫಾಟಾ ಹಾಗೂ ಗೌರಿಕುಂಡ್‌ನಲ್ಲಿ ವಾಸ್ತವ್ಯ ಹೂಡಲಾಗುತ್ತದೆ. ನಂತರ ಮೇ.1 ರಂದು ರಾತ್ರಿಯ ವೇಳೆಗೆ ಕೇದಾರನಾಥ ದೇವಾಲಯವನ್ನು ತಲುಪತ್ತದೆ. ಮೇ 2 ಶುಕ್ರವಾರ ಬೆಳಗ್ಗೆ 7 ಗಂಟೆಗೆ ತೆರೆಯುತ್ತದೆ. ವೃಷಭ ಲಗ್ನದಲ್ಲಿ, ಕೇದಾರನಾಥ ಧಾಮದ ಬಾಗಿಲು ಯಾತ್ರಾರ್ಥಿಗಳಿಗೆ ತೆರೆಯಲಾಗುತ್ತದೆ. ಕಳೆಕುಂದಿದ್ದ ಬಾಬಾ ಕೇದಾರನಾಥದ 6 ತಿಂಗಳ ಬೇಸಿಗೆ ಪ್ರಯಾಣ ಆರಂಭವಾಗಲಿದೆ. ಸಂಪ್ರದಾಯದಂತೆ ಕಪಟೋತ್ಸವ ಸಹ ನಡೆಯಲಿದ್ದು, ಇದಕ್ಕು ಮುನ್ನ ಬಿಕೆಟಿಸಿ ಅಂದರೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ  ಸಿದ್ಧತೆ ಮಾಡಿಕೊಳ್ಳುತ್ತದೆ. ಡೋಲಿ ಮೆರವಣಿಗೆಗೂ ಮುನ್ನ ದೇವಾಲಯ ಸಮಿತಿಯ ಪ್ರಸ್ತುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಜಯ್ ಪ್ರಸಾದ್ ಥಾಪ್ಲಿಯಾಲ್ ಯಾತ್ರಾರ್ಥಿಗಳಿಗೆ ಶುಭಕೋರಿದ್ದಾರೆ. ಬದರೀನಾಥ ದೇವಾಲಯವು ಮೇ 4 ರಂದು ತೆರೆಯಲಾಗುತ್ತದೆ.

Author:

...
Sushmitha N

Copy Editor

prajashakthi tv

share
No Reviews