ಕೊರಟಗೆರೆ : ಸಿದ್ದರಬೆಟ್ಟ ತಪೋಕ್ಷೇತ್ರಕ್ಕೆ ನೀರಿನ ಘಟಕವನ್ನು ಕೊಡುಗೆ ನೀಡಿದ ದಾನಿ

ಕೊರಟಗೆರೆ :

ಪ್ರಜಾಶಕ್ತಿ ಟಿವಿ ತುಮಕೂರು ಜನರ ನಾಡಿಮಿಡಿತವಾಗಿ ಕೆಲಸ ಮಾಡ್ತಾ ಇದ್ದು, ಸಣ್ಣ ಸಣ್ಣ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿ. ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡಲಾಗುತ್ತಿತ್ತು. ಇದರಿಂದ ಜನರ ಸಮಸ್ಯೆಗಳು ಸರಾಗವಾಗಿ ಕ್ಲಿಯರ್‌ ಆಗ್ತಿದೆ. ಹೌದು ಕಳೆದ 15 ದಿನಗಳ ಹಿಂದೆ ಸಿದ್ದರಬೆಟ್ಟ ತಪೋಕ್ಷೇತ್ರದಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯ ಕೊರತೆ ಹೆಚ್ಚಾಗಿದ್ದು, ಅದರಲ್ಲೂ ಸಿದ್ದರಬೆಟ್ಟದ ದಾಸೋಹ ಭವನದಲ್ಲಿ ಮೂಲಭೂತ ಸೌಕರ್ಯದ ಸಮಸ್ಯೆ ಎದುರಾಗಿತ್ತು. ಇದರಿಂದ  ಭಕ್ತರು ಹಾಗೂ  ಪ್ರವಾಸಿಗರಿಗೆ ಸಾಕಷ್ಟು ತೊಂದರೆ. ಈ ಬಗ್ಗೆ ನಿಮ್ಮ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸಿತ್ತು. ಪ್ರಜಾಶಕ್ತಿ ವರದಿ ಬಳಿಕ ಭಕ್ತರ ನೆರವಿಗೆ ಸಮಾಜ ಸೇವಕರು ಬಂದಿದ್ದಾರೆ.

ಸಿದ್ದರಬೆಟ್ಟ ದಾಸೋಹ ಭವನದಲ್ಲಿ ಭಕ್ತರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಹೀಗಾಗಿ ಸಮಾಜ ಸೇವಕರಾದ ವಿ.ನಟರಾಜ್‌ ಎಂಬುವವರು ದಾಸೋಹ ಭವನಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪನೆ ಮಾಡಿದ್ದಾರೆ. ಹೌದು ದಾಸೋಹ ಭವನಕ್ಕೆ ಎರಡು ಮಿನಿ ನೀರಿನ ಘಟಕಗಳನ್ನು ನಟರಾಜ್‌ ಅವರು ಕೊಡುಗೆಯಾಗಿ ನೀಡಿದ್ದಾರೆ, ಇದರಿಂದ ಶ್ರೀ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತರಿಗೆ ನೀರಿನ ಸಮಸ್ಯೆಯಿಂದ ಮುಕ್ತಿ ಪಡೆಯುವಂತಾಗಿದೆ.

ಇನ್ನು ಸಿದ್ದರಬೆಟ್ಟ ಕ್ಷೇತ್ರಕ್ಕೆ ನಿತ್ಯ ಬರುವ ಸಾವಿರಾರು ಭಕ್ತರು ದಾಸೋಹ ಭವನಕ್ಕೆ ಬಂದು ಪ್ರಸಾದ ಸೇವಿಸ್ತಾರೆ. ಆದರೆ ಬರುವ ಭಕ್ತರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ಪ್ರಜಾಶಕ್ತಿ ವಾಹಿನಿಯಲ್ಲಿ ವರದಿ ಮಾಡಲಾಗಿತ್ತು. ವರದಿಯನ್ನು ನೋಡಿರೋ ಮಣುವಿನಕುರಿಕೆ ಗ್ರಾಮದ ಸಮಾಜ ಸೇವಕ ಹಾಗೂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಟರಾಜ್ ಎರಡು ಮಿನಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇನ್ನು ದಾಸೋಹ ಭವನದಲ್ಲಿ ಸ್ಥಾಪನೆಯಾದ ನೀರಿನ ಘಟಕಕ್ಕೆ ಬಾಳೆ ಹೊನ್ನೂರು ಶಾಖಾ ಮಠದ ಪೀಠಾಧ್ಯಕ್ಷರಾದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು. ಬಳಿಕ ಕುಡಿಯುವ ನೀರಿನ ಘಟಕವನ್ನು ಕೊಡುಗೆ ನೀಡಿದ ನಟರಾಜ್‌ಗೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಸನ್ಮಾನ ಮಾಡಲಾಯಿತು.

Author:

share
No Reviews