ಡೊನಾಲ್ಡ್ ಟ್ರಂಪ್ ನ ಮತ್ತೊಂದು ವಿವಾದಾತ್ಮಕ ಹೇಳಿಕೆ..!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್
ಅಂತರರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಭಾರತದ ಜೊತೆಗೆ ಕಿರಿಕ್ ತೆಗೆಯುತ್ತಿದ್ದು, ಭಾರತದ ಬಗ್ಗೆಯೇ ಹೊಗಳುತ್ತಾ, ಭಾರತ ಮೂಲದ ಮತದಾರರ ಬೆಂಬಲ ಪಡೆದು ಅಮೆರಿಕ ಅಧ್ಯಕ್ಷರಾಗಿದ್ದರೂ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಮ್ಮೆ ಟ್ರಂಪ್ ಅವರು ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ.

ಅಮೆರಿಕ ನೂರಾರು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಸಮಯದಲ್ಲೇ, ಅಲ್ಲಿನ ಅಧ್ಯಕ್ಷರು ಭಾರತದ ಬಗ್ಗೆ ಮಾತನಾಡಿರುವುದು ಈಗ ಭಾರಿ ವಿವಾದಕ್ಕೆ ದಾರಿ ಮಾಡಿಕೊಡುತ್ತಿದೆ. ಭಾರತ ಜಗತ್ತಿನಲ್ಲೇ ಅತ್ಯಧಿಕ ತೆರಿಗೆ ದರ ಪ್ರಮಾಣ ಹೊಂದಿರುವ ದೇಶವಾಗಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಹಾಗೇ ಇದೇ ವೇಳೆ ಭಾರತಕ್ಕೆ ಅಮೆರಿಕದಿಂದ ಸಿಗುತ್ತಿರುವ ಅನುದಾನದ ವಿಚಾರವನ್ನು ಕೂಡ ಪ್ರಸ್ತಾಪ ಮಾಡಿದ್ದಾರೆ ಟ್ರಂಪ್.

ಡೊನಾಲ್ಡ್‌ ಟ್ರಂಪ್‌ ಮತದಾನದ ಪ್ರಮಾಣ ಹೆಚ್ಚಿಸುವ ಉದ್ದೇಶಕ್ಕೆ ಭಾರತಕ್ಕೆ 21 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಅವಶ್ಯಕತೆ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಸುಮಾರು 182 ಕೋಟಿ ರೂಪಾಯಿ ನೆರವು ನೀಡುತ್ತಿರುವ ಬಗ್ಗೆ ಕೂಡ ಟ್ರಂಪ್ ಹೇಳಿಕೆ ನೀಡಿರುವುದು ಈಗ ಸಂಚಲನ ಸೃಷ್ಟಿ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೆರಿಗೆ ವಿಚಾರವಾಗಿ ಶುರು ಮಾಡಿರುವ ಯುದ್ಧವು ಇಷ್ಟಕ್ಕೇ ನಿಲ್ಲುವ ರೀತಿ ಕಾಣುತ್ತಿಲ್ಲ. ಅದರಲ್ಲೂ, ಮತದಾನ ಪ್ರಮಾಣ ಹೆಚ್ಚಿಸಲು ಭಾರತದ ಚುನಾವಣಾ ಆಯೋಗಕ್ಕೆ 21 ಮಿಲಿಯನ್ ಡಾಲರ್ ನೀಡಲಾಗಿದೆ ಎಂದು ಎಲಾನ್ ಮಸ್ಕ್ ನೇತೃತ್ವದ ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ ಹೇಳಿಕೆಯ ನಂತರ ರೀತಿ ಟ್ರಂಪ್ ಮಾತನಾಡಿದ್ದಾರೆ. ಹೀಗಾಗಿ, ವಿಚಾರವು ದೊಡ್ಡ ಕಾಂಟ್ರವರ್ಸಿ ಹುಟ್ಟುಹಾಕುವ ಸಾಧ್ಯತೆ ದಟ್ಟವಾಗಿದೆ.

Author:

share
No Reviews