ದೇಶ : ಪ್ರತಿಯೊಂದು ದೇಶ ಕೂಡ ತಾನು ತಾಂತ್ರಿಕವಾಗಿ ಬಲಶಾಲಿಯಾಬೇಕು. ವಿಶ್ವಾದ್ಯಂತ ತನ್ನ ವೈಜ್ಞಾನಿಕ ಹೆಜ್ಜೆ ಗುರುತನ್ನು ಇಡಬೇಕು. ತಾನೊಬ್ಬನೇ ಬಲಶಾಲೆ ಅಂತ ಬೀಗಬೇಕು ಅನ್ನೋ ಮನಸ್ಸನ್ನ ಹೊಂದಿರುತ್ತದೆ. ಇದಕ್ಕಾಗಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತೆ. ಪ್ರತಿ ದೇಶ ತನ್ನ ದೇಶ, ದೇಶದ ಪ್ರಜೆಗಳನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಣುಬಾಂಬ್, ಕ್ಷಿಪಣಿ, ಅತ್ಯಾಧುನಿಕ ತಂತ್ರಜ್ಞಾನದ ಫೈಟರ್ ಜೆಟ್ಗಳ ದಾಳಿ ತಡೆಯಲು ಮುಂದಾಗುತ್ತಿವೆ. ಹೀಗೆ ತಮ್ಮ ಮೂರು ವಲಯಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಆದ್ರೆ ಇತ್ತೀಚೆಗೆ ಬಂದಿವರು ಆವಿಷ್ಕಾರ ಕೇಳಿದ್ರು ನೀವು ಬೆರಗಾಗ್ತಿರಾ.
ತಮ್ಮ ದೇಶವನ್ನು ಶತ್ರರಾಷ್ಟ್ರಗಳಿಂದ ರಕ್ಷಸಿಕೊಳ್ಳಲು ಇದೀಗ ಹಲವು ದೇಶಗಳು ನೂತನ ಆವಿಷ್ಕಾರದ ಮೊರೆ ಹೋಗುತ್ತಿದೆ. ಈ ಕಾರಣಕ್ಕೆ ಹಲವು ರೀತಿಯ ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ತಾವು ಕಂಡುಕೊಳ್ಳುತ್ತಿರುವ ಆವಿಷ್ಕಾರದಿಂದಾಗಿ ತಾವು ವೈಜ್ಞಾನಿಕವಾಗಿ ನಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನ ತೋರಿಸುತ್ತಿವೆ. ಇದಕ್ಕೆ ಉದಹರಣೆ ಐರನ್ ಡೋಮ್ ಮತ್ತು ಗೋಲ್ಡನ್ ಡೋಮ್.
ಈ ಎರಡು ತಂತ್ರಜ್ಞಾನದಿಂದಾಗಿ ಸುಲಭವಾಗಿ ಒಂದು ದೇಶ ಇತರೇ ದೇಶ ನಡೆಸುವ ದಾಳಿಯನ್ನ ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಬಹುದು. ಇದೇ ಕಾರಣಕ್ಕೆ ಈ ಐರನ್ ಡೋಮ್ ಮತ್ತು ಗೋಲ್ಡನ್ ಡೋಮ್ ನ್ನು ಕಂಡು ಹಿಡಿಯಲಾಗಿದೆ. ಇದನ್ನು 2011 ರಲ್ಲಿ ಮೊದಲ ಬಾರಿಗೆ ಇಸ್ರೇಲ್ ಕಂಡುಕೊಂಡಿತ್ತು. ಇಸ್ರೇಲ್ ಆವಿಷ್ಕಾರದ ಫಲವಾಗಿ ಜೀವಪಡೆದುಕೊಂಡಿದ್ದೆ ಐರನ್ ಡೋಮ್. ತನ್ನ ದೇಶದ ಮೇಲೆ ಆಗುವ ವೈಮಾನಿಕಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ತಂತ್ರಜ್ಞಾವನ್ನ ಆವಿಷ್ಕರಿಸಿತ್ತು. ಇಂತಹದೊಂದು ತಂತ್ರಜ್ಞಾನದ ಆವಿಷ್ಕಾರಕ್ಕೆ ಅಮೇರಿಕಾ 1.6 ಮಿಲಿಯನ್ ಡಾಲರ್ ಕೂಡ ನೀಡಿತ್ತು ಎನ್ನಲಾಗಿದೆ. ಈ ಐರನ್ ಡೋಮ್ ತನ್ನ ಪಥದಿಂದ ಸುಮಾರು 70 ಕಿ.ಮೀಟರ್ ದೂರದಲ್ಲಿ ಉಡಾಯಿಸಬಲ್ಲ ಯಾವುದೇ ಮಿಸೈಲ್, ರಾಕೇಟ್ ಇನ್ನಿತರ ಕ್ಷಿಪಣಿಗಳನ್ನು ಅದರ ಹಾರಾಟಕ್ಕೆ ಮುನ್ನವೇ ಉಡಾಯಿಸುವ ಕೆಲಸವನ್ನು ಮಾಡುತ್ತದೆ. ತನ್ನತ್ತ ಬರಬಲ್ಲ ರಾಕೆಟ್, ಮಿಸೈಲ್, ಡ್ರೋನ್ ಅನ್ನು ಜನನಿಬಿಡ ಪ್ರದೇಶತ್ತ ಬೀಳುವಂತೆ ಮಾಡುವ ಸಾಮರ್ಥ್ಯ ಹೊಂದಿದೆ.
ಇಂತಹ ಆವಿಷ್ಕಾವನ್ನು ಇಸ್ರೇಲ್ ತನ್ನ ಪ್ರಜೆಗಳನ್ನು ರಕ್ಷಿಸುವುದಕ್ಕಾಗಿ ಮಾಡಿತ್ತು. ಐರನ್ ಡೋಮ್ ಬೆನ್ನಲ್ಲೇ ಈಗ ಅಮೆರಿಕಾ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಗೋಲ್ಡನ್ ಡೋಮ್ನ್ನು ಆವಿಷ್ಕರಿಸಿದೆ. ಈ ಆವೀಷ್ಕಾರವು ಒಂದು ಬಹುಪದರವುಳ್ಳ ಗುಮ್ಮಟದಂತೆ ಕಾರ್ಯನಿರ್ವಹಿಸುತ್ತದೆ. ಐರನ್ ಡೋಮ್ ಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದು, ಗೋಲ್ಡನ್ ಡೋಮ್ ಐರನ್ ಡೋಮ್ಗಿಂತಲೂ 10 ಪಟ್ಟು ಕಾರ್ಯನಿರ್ವಹಿಸುತ್ತಿದೆಯಂತೆ ಈ ಕಾರಣಕ್ಕೆ ಇಂತಹದೊಂದು ಆವೀಷ್ಕಾರಕ್ಕೆ ಡೊನಾಲ್ಡ್ ಟ್ರಂಪ್ ಚಾಲನೆ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಲಾಗುವ ತಂತ್ರಜ್ಞಾನ ಇದಾಗಿದ್ದು. ಇದನ್ನು 175 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಂದಾಜಿಸಲಾಗಿದೆ. ಇದು ಅಮೆರಿಕವನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿ ದಾಳಿಯಿಂದಲೂ ರಕ್ಷಿಸುತ್ತದೆ ಎಂದಿದ್ದಾರೆ.
ಈಗಾಗಲೇ ಗೋಲ್ಡನ್ ಡೋಮ್ಗಾಗಿ 25 ಬಿಲಿಯನ್ ಡಾಲರ್ಗಳನ್ನು ಅಮೆರಿಕ ಸರ್ಕಾರ ಹಂಚಿಕೆ ಮಾಡಿದಿಯಂತೆ. ಗೋಲ್ಡನ್ ಡೋಮ್ ನಿರ್ಮಿಸಲು 175 ಮಿಲಿಯನ್ ಖರ್ಚಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಹೀಗಿದ್ದರೂ ಈ ವ್ಯವಸ್ಥೆ ಸಾಕಷ್ಟು ಸಂಕೀರ್ಣತೆಯಿಂದ ಕೂಡಿದ್ದು, ಅಂತಿಮವಾಗಿ 500 ಬಲಿಯನ್ ಡಾಲರ್ ತಲುಪಬಹುದು ಎನ್ನಲಾಗಿದೆ. ಈ ಯೋಜನೆಗೆ ಸೇರಲು ಕೆನಾಡ ಕೂಡ ಕಾಯುತ್ತಿದೆಯಂತೆ.