ಶಕ್ತಿ ಭಕ್ತಿ ಮತ್ತು ಧೈರ್ಯದ ಸಂಕೇತವಾದ ಹನುಮಾನ್‌ಗೆ ಮಂಗಳವಾರ ಸಮರ್ಪಿತವಾಗಿದೆ.ಈ ದಿನ ಕೆಲವು ಕಾರ್ಯಗಳನ್ನು ಮಾಡಬಾರದು. ಅಪ್ಪಿತಪ್ಪಿ ಈ ಕೆಲಸ ಮಾಡಿದರೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು. ಶಕ್ತಿ, ಭಕ್ತಿ ಮತ್ತು ಧೈರ್ಯದ ಸಂಕೇತವಾದ ಹನುಮಾನ್‌ಗೆ ಮಂಗಳವಾರ ಸಮರ್ಪಿತವಾಗಿದೆ.ಮಂಗಳವಾರದ ದಿನ ಕೆಲವು ಕಾರ್ಯಗಳನ್ನು ಮಾಡಬಾರದು. ಅಪ್ಪಿತಪ್ಪಿ ಈ ಕೆಲಸ ಮಾಡಿದರೆ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು.
*ಚೂಪಾದ ವಸ್ತುಗಳನ್ನು ಖರೀದಿಸಬಾರದು
ಮಂಗಳವಾರದ ದಿನ ಚಾಕುಗಳು, ಕತ್ತರಿ, ಬ್ಲೇಡ್ ಗಳು ಅಥವಾ ಇತರ ಚೂಪಾದ ವಸ್ತುಗಳನ್ನು ಖರೀದಿಸಬೇಡಿ. ಜ್ಯೋತಿಷ್ಯದಲ್ಲಿ, ಮಂಗಳನನ್ನು ರಕ್ತ ಮತ್ತು ಯುದ್ಧಕ್ಕೆ ಕಾರಣವೆಂದು ಪರಿಗಣಿಸಲಾಗುತ್ತದೆ.
*ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು
ಮಂಗಳವಾರದಂದು ಕೂದಲನ್ನು ಕತ್ತರಿಸುವುದು,ಶೇವಿಂಗ್ ಮಾಡುವುದು ಮತ್ತು ಉಗುರುಗಳನ್ನು ಕತ್ತರಿಸುವುದನ್ನು ತಪ್ಪಿಸಬೇಕು. ಇದನ್ನು ಮಾಡುವುದರಿಂದ, ಮಂಗಳ ದೇವರು ಮತ್ತು ಹನುಮಾನ್ ಕೋಪಗೊಳ್ಳುತ್ತಾನೆ. ಇದು ವ್ಯಕ್ತಿಯ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
*ಪ್ಲಾಸ್ಟಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು
ಮಂಗಳವಾರ ಯಾರೂ ಪ್ಲಾಸ್ಟಿಕ್ ವಸ್ತುಗಳನ್ನು ಉಡುಗೊರೆಯಾಗಿ ನೀಡಬಾರದು.ಹಾಗೆ ಮಾಡುವುದರಿಂದ ಸಂಬಂಧಗಳಿಗೆ ಹಾನಿಯಾಗಬಹುದು.
*ಕಪ್ಪು ಬಟ್ಟೆಗಳನ್ನು ಧರಿಸಬಾರದು
ಮಂಗಳವಾರ ಕಪ್ಪು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ಈ ದಿನ ಕೆಂಪು ಅಥವಾ ಕಿತ್ತಳೆ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಹೊಸ ಮನೆಗೆ ಗುದ್ದಲಿ ಪೂಜೆ ಮಾಡಬಾರದು
ಜ್ಯೋತಿಷ್ಯದಲ್ಲಿ ಹನುಮಂತನನ್ನು ಭೂಮಿಯ ಮಗ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮಂಗಳವಾರ ಹೊಸ ಮನೆಗೆ ಭೂಮಿಯನ್ನ ಖರೀದಿಸಬೇಡಿ ಅಥವಾ ಹೊಸ ಮನೆ ಕಟ್ಟಲು ಭೂಮಿಪೂಜೆಯನ್ನು ಮಾಡಬಾರದು.