ದೊಡ್ದಬಳ್ಳಾಪುರ:
ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಸಮೀಪವಿದ್ದು ಸಾಕಷ್ಟು ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ಇಲ್ಲಿನ ಮಕ್ಕಳ ಜೀವಕ್ಕೆ ಆಪತ್ತು ಆಗುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕಾಮಗಾರಿಗಳು ಅರ್ಧಂಬರ್ಧ ಆಗಿದ್ದರಿಂದ ಗುಂಡಿಗಳು ಸೃಷ್ಟಿಯಾಗಿದ್ದು ಮಕ್ಕಳು ಗುಂಡಿಗೆ ಬಿದ್ದು ಪ್ರಾಣಕ್ಕೆ ಸಂಚಕಾರ ಎದುರಾಗುವ ಸ್ಥಿತಿ ಎದುರಾಗಿತ್ತು. ಈ ಬಗ್ಗೆ ಪ್ರಜಾಶಕ್ತಿ ಟಿವಿ ಬೆಳಕು ಚೆಲ್ಲಿದ್ದು ಸುದ್ದಿ ಮಾಡುವುದರ ಜೊತೆಗೆ ಅಧಿಕಾರಿಗಳಿಗೆ ಮಾಹಿತಿ ಸಹ ನೀಡಿತ್ತು. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಬಾ ಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಸುಮಾರು 50 ಮೀಟರ್‌ನಲ್ಲಿ ಅಂಗನವಾಡಿ ಕೇಂದ್ರವಿದೆ. ಆದರೆ ಅಂಗನವಾಡಿಯಿಂದ ಮಕ್ಕಳನ್ನು ಆಚೆ ಬಿಟ್ಟರೆ ಮಕ್ಕಳನ್ನು ನೋಡಿಕೊಳ್ಳುವುದೇ ಇಲ್ಲಿನ ಸಹಾಯಕಿಯರಿಗೆ ದೊಡ್ಡ ತಲೆನೋವಾಗಿತ್ತು. ಏಕೆಂದರೆ ಅಂಗನವಾಡಿ ಪಕ್ಕದಲ್ಲಿಯೇ ಕಾಮಗಾರಿ ನಡೆದಿದ್ದು, ಗುಂಡಿಗಳನ್ನು ತೆಗೆದು ಮುಚ್ಚದೇ ಅರ್ಧಂ ಬರ್ಧ ಕಾಮಗಾರಿ ಮಾಡಿದ್ದರು. ಇದರಿಂದ ಮಕ್ಕಳು ಆಟವಾಡುವ ವೇಳೆ ಆಕಸ್ಮಿಕವಾಗಿ ಗುಂಡಿಗೇ ಬೀಳುವ ಸಾದ್ಯತೆ ಹೆಚ್ಚಾಗಿದ್ದು ಮಕ್ಕಳ ಪ್ರಾಣ ಉಳಿಸುವುದೇ ಸಹಾಯಕಿಯರಿಗೆ ದೊಡ್ಡ ಸವಾಲಾಗಿತ್ತು.
ಗುಂಡಿಗಳನ್ನು ಮುಚ್ಚುವಂತೆ ಅಂಗನವಾಡಿ ಸಹಾಯಕಿಯರೇ ಖುದ್ದಾಗಿ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದರು, ಆದರೆ ಅಧಿಕಾರಿಗಳು ಮಾತ್ರ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಗುಂಡಿ ಸಮಸ್ಯೆ ವಿರುದ್ಧ ಪ್ರಜಾಶಕ್ತಿ ಟಿವಿ ಕ್ರಮ ಕೈಗೊಳ್ಳಲು ಮುಂದಾಗಿತ್ತು ಪ್ರಜಾಶಕ್ತಿ ಟಿವಿಯ ವರದಿಗಾರರು ಗುಂಡಿಯಿಂದ ಮಕ್ಕಳ ಜೀವವನ್ನು ರಕ್ಷಿಸಲು ಸುದ್ದಿ ಮಾಡಲು ಮುಂದಾಗಿತ್ತು. ಜೊತೆಗೆ ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ಕೂಡ ತರಲಾಗಿತ್ತು. ಸ್ಥಳಕ್ಕೆ ಪ್ರಜಾಶಕ್ತಿ ಟೀಂ ಹೋಗುತ್ತಿದ್ದಂತೆ ಸ್ಥಳಕ್ಕೆ ಬಾ ಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಕಾರ್ಯ ನಿರ್ವಹಣಾ ಅಧಿಕಾರಿ ನರಸಿಂಹ ಮೂರ್ತಿ, ತಕ್ಷಣವೇ ಸ್ಪಂದಿಸಿ ಗುಂಡಿ ಮುಚ್ಚುವ ಕಾರ್ಯವನ್ನು ಮಾಡಿಸಿದ್ದಾರೆ.
ಪ್ರಜಾಶಕ್ತಿ ಯಾವಾಗಲು ಜನಪರ ಸುದ್ದಿ ಮಾಡಿ, ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸ್ತಾ ಇದ್ದು, ಪ್ರಜಾಶಕ್ತಿ ಟಿವಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಇದೇ ರೀತಿ ಜನರ ಸೇವೆಯನ್ನು ಮುಂದುವರೆಸಿ ಎಂದು ಆಶಿಸಿದ್ದಾರೆ.