ತೆಂಗಿನಎಣ್ಣೆ ಚರ್ಮ, ಕೂದಲು ಹಾಗೂ ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಹಾಗಾಗಿ ಇದು ಕೂದಲಿಗೆ ಹಾಗೂ ಚರ್ಮಕ್ಕೆ ನೈಸರ್ಗಿಕ ವರದಾನವಾಗಿದೆ ಎಂದರೆ ತಪ್ಪಾಗಲಾರದು. ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಸಮೃದ್ಧವಾಗಿದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್, ಶಿಲೀಂಧ್ರ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದು ಚರ್ಮದ ಕಿರಿಕಿರಿ, ಕೆಂಪು ಮತ್ತು ಎಸ್ಜಿಮಾ, ಮುಖದ ಮೇಲೆ ನೆರಿಗೆ ಸಮಸ್ಯೆ ಮತ್ತು ಮೊಡವೆ ಗಳಂತಹ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.
*ಸ್ಟ್ರೆಚ್ ಮಾರ್ಕ್ ನಿವಾರಣೆ
ಮಹಿಳೆಯರ ದೇಹದಲ್ಲಿ ಕಂಡುಬರುವಂತಹ ಸ್ಟ್ರೆಚ್ ಮಾರ್ಕ್ಗಳನ್ನು ನಿವಾರಿಸುವವರೆಗೂ ಇದು ಎಲ್ಲಾ ವಯಸ್ಸಿನ ಜನರಿಗೆ ಸೂಕ್ತ ಆಯ್ಕೆಯಾಗಿದೆ. ತೆಂಗಿನೆಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು ಸಮೃದ್ಧವಾಗಿದೆ. ಇದು ಫ್ರೀ ರಾಡಿಕಲ್ಗಳನ್ನು ತಟಸ್ಥಗೊಳಿಸುವಲ್ಲಿ, ಚರ್ಮದ ಯೌವನವನ್ನು ಹೆಚ್ಚಿಸುವಲ್ಲಿ ಮತ್ತು ಅಕಾಲಿಕ ವಯಸ್ಸಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
*ತೆಂಗಿನೆಣ್ಣೆಯ ಉರಿಯೂತ ನಿವಾಕರಕ
ತೆಂಗಿನೆಣ್ಣೆಯ ಉರಿಯೂತ ನಿವಾರಕ ಗುಣಲಕ್ಷಣಗಳು ಸೂಕ್ಷ್ಮ ಚರ್ಮ, ಕೆಂಪು ಮತ್ತು ಕಿರಿಕಿರಿಯನ್ನು ಶಮನಗೊಳಿಸಲು ಸೂಕ್ತವಾಗಿದೆ. ಇದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಬ್ಯಾಕ್ಟೀರಿಯಾಗಳಿಂದಾಗುವ ಮೊಡವೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದರಿಂದ ಮೊಡವೆಗಳು ಬಹಳ ವೇಗವಾಗಿ ವಾಸಿಯಾಗುತ್ತವೆ. ಅಲ್ಲದೇ ಆ್ಯಂಟಿ ಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ತೆಂಗಿನ ಎಣ್ಣೆಯು ಬೇಗ ವಯಸ್ಸಾಗುವುದನ್ನು ತಡೆದು ಸೂಕ್ಷ್ಮ ಗೆರೆಗಳು ಮತ್ತು ನೆರಿಗೆಗಳನ್ನು ಕಡಿಮೆ ಮಾಡುತ್ತದೆ, ಕಾಲಜನ್ ಉತ್ಪಾದನೆಯನ್ನು ಮತ್ತು ಚರ್ಮದ ದೃಢತೆಯನ್ನು ಹೆಚ್ಚಿಸುತ್ತದೆ.
*ಚಳಿಗಾಲದಲ್ಲಿ, ತೆಂಗಿನೆಣ್ಣೆಗೆ ಕೆಲವು ಹನಿ ವಿಟಮಿನ್ ಇ ಎಣ್ಣೆಯನ್ನು ಮಿಕ್ಸ್ ಮಾಡಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದ ಆರ್ದ್ರತೆಯನ್ನು ಹೆಚ್ಚಿಸುತ್ತದೆ. ಇದು ಚರ್ಮ ಶುಷ್ಕತೆಯನ್ನು ನಿವಾರಿಸುತ್ತದೆ. ತೆಂಗಿನೆಣ್ಣೆ ಮಳೆಗಾಲ ಮತ್ತು ಚಳಿಗಾಲದ ಚರ್ಮದ ಆರೈಕೆಗೆ ಸೂಕ್ತವಾಗಿದೆ. ಮಳೆಗಾಲದಲ್ಲಿ, ತೆಂಗಿನೆಣ್ಣೆಯನ್ನು ಲ್ಯಾವೆಂಡರ್ ಅಥವಾ ಟೀ ಟ್ರೀಯಂತಹ ಎಸೆನ್ಷಿಯಲ್ ಆಯಿಲ್ಗಳೊಂದಿಗೆ ಬೆರೆಸಿ, ಚರ್ಮಕ್ಕೆ ಹಚ್ಚಿದರೆ ಇದು ಶಿಲೀಂಧ್ರಗಳ ಸೋಂಕು ಮತ್ತು ಮೊಡವೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.