HEALTH TIPS: ಲವಂಗ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತೆ..?

ಲವಂಗ ನೀರು ಗ್ಯಾಸ್ಟಿಕ್, ಆಮ್ಲೀಯತೆ, ಹೊಟ್ಟೆ ಉಬ್ಬುವುದು ಹಾಗೂ ಅಜೀರ್ಣದಂತಹ ಹೊಟ್ಟೆಯ  ಕಾಯಿಲೆಗಳನ್ನು ಗುಣಪಡಿಸುತ್ತದೆ.ಲವಂಗದ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಿಣ್ವಗಳು ಹೆಚ್ಚಾಗುವುದರಿಂದ ಆಹಾರದ ಜೀರ್ಣ ಸುಲಭವಾಗುತ್ತದೆ.

ಲವಂಗವನ್ನು ನೀರಿಗೆ ಹಾಕಿದಾಗ ಅದರೊಂದಿಗೆ ಬೆರೆತು ನೈಸರ್ಗಿಕವಾಗಿ ತಂಪು ಆಗುತ್ತದೆ.ಇದು ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಹೊಟ್ಟೆಯಲ್ಲಿ ಸುಡುವ ಸಂವೇದನೆ ಇದ್ದರೇ ಅದನ್ನು ನಿವಾರಿಸುತ್ತದೆ. ಲವಂಗ ನೀರು ದೇಹದ ತೇವಾಂಶವನ್ನ ಕಾಪಾಡುತ್ತದೆ.

*ತೂಕ ಇಳಿಕೆಗೆ ಸಹಾಯ ಮಾಡುತ್ತದೆ

ಲವಂಗದ ನೀರು ನಿಮ್ಮ ಚಯಾಪಚಯ ಕ್ರಿಯೆಗೆ ಅಗತ್ಯವಾದ ರಸಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದರ ಸಕ್ರಿಯ ಸಂಯುಕ್ತವಾದ ಯುಜೆನಾಲ್, ಕೊಬ್ಬಿನ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಇದು ದೈನಂದಿನ ತೂಕ ನಿರ್ವಹಣೆಯಲ್ಲಿ ಹೆಚ್ಚು ಸಹಾಯಕವಾಗಿದೆ.

*ಶುಗರ್​ ನಿಯಂತ್ರಿಸುತ್ತದೆ

ನಿಮ್ಮ ರಕ್ತದಲ್ಲಿನ ಶುಗರ್​ ಲೆವಲ್​ನ್ನು ನೈಸರ್ಗಿಕವಾಗಿ ನಿಯಂತ್ರಿಸಲು ನೀವು ಬಯಸಿದರೆ, ಲವಂಗದ ನೀರನ್ನು ಸೇವನೆ ಮಾಡಬಹುದು. ಲವಂಗದಲ್ಲಿರುವ ಯುಜೆನಾಲ್ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಒಟ್ಟಾರೆ ಚಯಾಪಚಯ ಆರೋಗ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.

*ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ

ಲವಂಗದ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇರುವುದರಿಂದ, ನಿಮ್ಮ ರೋಗನಿರೋಧಕ ಶಕ್ತಿ ಬಲಪಡಿಸುತ್ತದೆ. ಸಾಮಾನ್ಯ ಸೋಂಕುಗಳು ಹಾಗೂ ರೋಗಗಳಿಂದ ನಿಮ್ಮನ್ನು  ರಕ್ಷಿಸುತ್ತದೆ.

*ಜೀರ್ಣಕ್ರಿಯೆ ಉತ್ತೇಜಿಸುತ್ತೆ ಮತ್ತು ಹೊಟ್ಟೆ ಉಬ್ಬರ ನಿವಾರಿಸುತ್ತದೆ

ಲವಂಗದ ನೀರನ್ನು ನಿಮಯಮಿತವಾಗಿ ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದಾಗಿದೆ.ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಅಜೀರ್ಣ ಕಡಿಮೆ ಮಾಡುತ್ತದೆ. ಲವಂಗದ ನೀರು ತೇಗುವಿಕೆ ಮತ್ತು ಗ್ಯಾಸ್ಟ್ರಿಕ್ ತೊಂದರೆಗಳಿಗೆ ನೈಸರ್ಗಿಕವಾಗಿ ಪರಿಹಾರ ಒದಗಿಸುತ್ತದೆ. ನಿರ್ವಿಶೀಕರಣ ಪ್ರಕ್ರಿಯೆ ಸಹಾಯ ಮಾಡುತ್ತದೆ ಎಂದು ಡಾ.ಭಾರದ್ವಾಜ್ ವಿವರಿಸುತ್ತಾರೆ.

 

*ಲವಂಗದ ನೀರು ತಯಾರಿಸುವುದು ಹೇಗೆ

ಮೊದಲು ಒಂದು ಲೋಟ ನೀರು ಕುದಿಸಿ. ನಂತರ ಅದರೊಳಗೆ ಲವಂಗ ಸೇರಿಸಿ 10 ರಿಂದ 15 ನಿಮಿಷ ನೆನೆಯಲು ಬಿಡಿ.ಬಳಿಕ ಲವಂಗದ ನೀರನ್ನು ಸೋಸಿಕೊಳ್ಳಿ. ಸ್ವಲ್ಪ ಈ ನೀರು ಆರಲು ಬಿಟ್ಟು ಹೆಚ್ಚಿನ ರುಚಿ ಹಾಗೂ ಮತ್ತಷ್ಟು ಪ್ರಯೋಜನಗಳಿಗೆ, ಒಂದು ಪೀಸ್​ ನಿಂಬೆ, ಒಂದು ಟೀಸ್ಪೂನ್ ಜೇನುತುಪ್ಪ ಸೇರಿಸಿ  ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ಲವಂಗದ ನೀರನ್ನು ಕುಡಿಯುವುದರಿಂದ ಹಲವು ಲಾಭಗಳು ದೊರೆಯುತ್ತವೆ. 

Author:

...
Sub Editor

ManyaSoft Admin

share
No Reviews