CCL 2025: CCl ಉದ್ಘಾಟನೆಗೆ ಡಿಕೆ ಶಿವಕುಮಾರ್‌ ರನ್ನ ಆಹ್ವಾನಿಸಿದ ಕಿಚ್ಚ ಸುದೀಪ್

ಡಿಕೆ‌ ಶಿವಕುಮಾರ್ ಮತ್ತು ನಟ ಸುದೀಪ್
ಡಿಕೆ‌ ಶಿವಕುಮಾರ್ ಮತ್ತು ನಟ ಸುದೀಪ್
ಸಿನಿಮಾ-ಟಿವಿ

Kiccha Sudeep:

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರನ್ನು ನಟ ಕಿಚ್ಚ ಸುದೀಪ್‌ ಅವರು ಸದಾಶಿವ ನಗರದ ನಿವಾಸದಲ್ಲಿ ದಿಢೀರ್‌ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ. ಫೆಬ್ರವರಿ 8 ರಿಂದ ಬೆಂಗಳೂರಿನಲ್ಲಿ ಸಿಸಿಎಲ್ ಆರಂಭ ಆಗಲಿದೆ. ಇದೇ ವೇಳೆ ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಸೀಸನ್- 11ರ ಉದ್ಘಾಟನೆ ಸಮಾರಂಭಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ಕಿಚ್ಚ ಸುದೀಪ್ ಅವರು ಆಹ್ವಾನಿಸಿದ್ದಾರೆ.

ಫೆಬ್ರುವರಿ 8 ರಂದು ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಸೀಸನ್- 11ರ ಉದ್ಘಾಟನೆ ಕಾರ್ಯಕ್ರಮ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇನ್ನು ಈ ಬಾರಿ ಸುದೀಪ್ ಅವರ ನೇತೃತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಮುನ್ನಡೆಯಲಿದ್ದು ಟ್ರೋಫಿ ಗೆಲ್ಲುವ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಉದ್ಯಮಿ ಅಶೋಕ್ ಖೇಣಿಯವರು ತಂಡದ ಮಾಲೀಕರಾಗಿದ್ದು ಸುದೀಪ್ ಅವರ ನೇತೃತ್ವದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಟೀಮ್ ಮುನ್ನಡೆಯಲಿದೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ಕರ್ನಾಟಕ ಬುಲ್ಡೋಜರ್ಸ್ ಈ ಬಾರಿ ಟ್ರೋಫಿ ಗೆಲ್ಲುವ ನಿರೀಕ್ಷೆಯಿಂದ ಅಖಾಡಕ್ಕೆ ಎಂಟ್ರಿ ಕೊಡುತ್ತಿದೆ. ಮೊದಲ ಪಂದ್ಯ ಬೆಂಗಳೂರಲ್ಲಿ ಫೆ.8 ರಂದು ನಡೆಯಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರೈನೋಸ್ ಹಾಗೂ ಬೆಂಗಾಲ್ ಟೈಗರ್ಸ್ ಸೆಣಸಾಡಲಿವೆ. ಇದರ ನಂತರ 2ನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಹಾಗೂ ತೆಲುಗು ವಾರಿಯರ್ಸ್ ಪಂದ್ಯವಾಡಲಿವೆ.

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಇದು ಭಾರತೀಯ ಚಿತ್ರರಂಗದ ವಿವಿಧ ಚಲನಚಿತ್ರೋದ್ಯಮಗಳ ನಟರ ತಂಡಗಳನ್ನು ಒಳಗೊಂಡ ಟೂರ್ನಿಯಾಗಿದೆ. 2025ರ ಟೂರ್ನಿಯಲ್ಲಿ ಒಟ್ಟು 7 ಟೀಮ್​ಗಳು ಭಾಗವಹಿಸಲಿವೆ. ಇದರಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್​ ಕೂಡ ಒಂದಾಗಿದೆ. ಇದರ ಜೊತೆಗೆ ಭೋಜ್​ಪುರಿ ದಬಾಂಗ್ಸ್, ಬೆಂಗಾಲ್ ಟೈಗರ್ಸ್​, ತೆಲುಗು ವಾರಿಯರ್ಸ್, ಚೆನ್ನೈ ರೈನೋಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್​ ತಂಡಗಳು ಇವೆ.

 

Author:

...
Editor

ManyaSoft Admin

Ads in Post
share
No Reviews