ಬಾಲಿವುಡ್ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಬ್ರಾಹ್ಮಣರ ಬಗ್ಗೆ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ರು. ಈ ಕುರಿತಾಗಿ ದೇಶದೆಲ್ಲೆಡೆ ಬ್ರಾಹ್ಮಣ ಸಮುದಾಯದಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅನುರಾಗ್ ಕಶ್ಯಪ್ ಕೂಡಲೇ ಕ್ಷಮೆಯಾಚಿಸಬೇಕೆಂದು ಆಕ್ರೋಶ ಹೊರಹಾಕಿದ್ವು. ಈ ಕಾರಣ ಇಂದು ಅನುರಾಗ್ ಕಶ್ಯಪ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬ್ರಾಹ್ಮಣರ ಕ್ಷಮೆಯಾಚಿಸಿದ್ದಾರೆ.
ಇನ್ನು ಅನುರಾಗ್ ಕಶ್ಯಪ್ ಸೋಷಿಯಲ್ ಮೀಡಿಯಾದಲ್ಲಿ ʼ ಕೋಪದಲ್ಲಿ ವ್ಯಕ್ತಿಯೋರ್ವರಿಗೆ ಉತ್ತರಿಸುವಾಗ, ನಾನು ನನ್ನ ಇತಿಮಿತಿಗಳನ್ನು ಮರೆತು ಇಡೀ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇನೆ. ಆ ಸಮುದಾಯದ ಅನೇಕರು ನನ್ನ ಸಹೋದ್ಯೋಗಿಗಳು. ಜೊತೆಗೆ, ನನ್ನನ್ನು ಬೆಂಬಲಿಸುತ್ತಾರೆ. ಅವರೆಲ್ಲರೂ ನನ್ನಿಂದ ನೋವಿಗೊಳಗಾಗಿದ್ದಾರೆ. ನನ್ನ ಕುಟುಂಬಕ್ಕೂ ನನ್ನಿಂದ ನೋವಾಗಿದೆ. ನಾನು ಗೌರವಿಸುವ ಅನೇಕ ಬುದ್ಧಿಜೀವಿಗಳಿಗೆ, ನನ್ನ ಕೋಪ ಮತ್ತು ನನ್ನ ಮಾತನಾಡುವ ವಿಧಾನದಿಂದ ನೋವುಂಟಾಗಿದೆ. ನೋವುಂಟುಮಾಡಿದ ಪ್ರತಿಯೊಬ್ಬರಿಗೂ ಮನದಾಳದಿಂದ ಕ್ಷಮೆಯಾಚಿಸುತ್ತೇನೆ. ನಾನು ಇದನ್ನು ಈ ಸಮಾಜಕ್ಕೆ ಹೇಳಲು ಬಯಸಿರಲಿಲ್ಲ. ಆದರೆ ಕೋಪದಲ್ಲಿ, ಯಾರೋ ಒಬ್ಬರ ಚೀಪ್ ಕಾಮೆಂಟ್‌ಗೆ ಉತ್ತರಿಸುವಾಗ, ಈ ಹೇಳಿಕೆ ನೀಡಿದ್ದೇನೆ. ಹೀಗೆ ಮಾತನಾಡಿದ್ದಕ್ಕಾಗಿ ನಾನು ನನ್ನ ಎಲ್ಲಾ ಸಹೋದ್ಯೋಗಿಗಳಿಗೆ, ನನ್ನ ಕುಟುಂಬಕ್ಕೆ ಮತ್ತು ಆ ಸಮಾಜಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಸಾವಿತ್ರಿ ಬಾ ಪುಲೆ ಅವರ ಜೀವನಾಧಾರಿತ ಚಿತ್ರದ ಕಾರ್ಯಕ್ರಮವೊಂದರಲ್ಲಿ ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತೇನೆ, Any ಪ್ರಾಬ್ಲಂ ಅಂತ ಹೇಳಿಕೆ ನೀಡಿದ್ದರು. ಇದು ಎಲ್ಲೆಡೆ ಅಕ್ರೋಶಕ್ಕೆ ಕಾರಣವಾಗಿತ್ತು. ಸದ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕ ಕ್ಷಮೆ ಯಾಚಿಸಿದ್ದಾರೆ.