ತುಮಕೂರು : ತುಮಕೂರಿನ ದಕ್ಷ ಎಸ್‌ಪಿ ಅಂತಾನೆ ಕರೆಸಿಕೊಳ್ಳೋ ಎಸ್‌ಪಿ ಕೆ.ವಿ ಅಶೋಕ್ ವೆಂಕಟ್‌ಗೆ ಪದಕವೊಂದಕ್ಕೆ ಭಾಜನರಾಗಿದ್ದಾರೆ. ಕಾರ್ಯದಕ್ಷತೆಯಿಂದಲೇ ಹೆಸರುವಾಸಿಯಾಗಿರೋ ತುಮಕೂರು ನಗರದ ಎಸ್‌ಪಿ ಅಶೋಕ್‌ಗೆ 2024-25 ನೇ ಸಾಲಿನ DG&IGP ಕಮೆಂಡೇಶನ್ ಡಿಸ್ಕ್ ಪದಕವನ್ನು ಪಡೆದಿದ್ದು ತುಮಕೂರಿಗರು ಸಂತಸ ವ್ಯಕ್ತಪಡಿಸಿದ್ದಾರೆ.
DG&IGP ಕಮೆಂಡೇಶನ್ ಡಿಸ್ಕ್ ಪದಕನ್ನು ಈ ವರ್ಷದಿಂದ ಕೊಡಲು ನಿರ್ಧಾರ ಮಾಡಲಾಗಿದ್ದು, ಪ್ರಥಮ ವರ್ಷದಲ್ಲೇ ತುಮಕೂರಿನ ಎಸ್‌ಪಿಗೆ ಈ ಪದಕ ಲಭಿಸಿರೋದು ಖುಷಿಯ ಸಂಗತಿಯಾಗಿದೆ. 2023ರಲ್ಲಿ ತುಮಕೂರಿನ ಎಸ್‌ಪಿ ಆಗಿ ಅಧಿಕಾರ ಸ್ವೀಕರಿಸಿದ ಅಶೋಕ್ ಕೆ.ವಿ ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇವರ ಕಾರ್ಯಕ್ಷಮತೆ, ಸಮರ್ಪಣೆ ಹಾಗೂ ಶೌರ್ಯವನ್ನು ಗುರುತಿಸಿ DG&IGP ಕಮೆಂಡೇಶನ್ ಡಿಸ್ಕ್ ಪದಕ ಘೋಷಣೆ ಮಾಡಲಾಗಿದೆ.
ಇನ್ನು ಇವರು ಅಧಿಕಾರವಹಿಸಿಕೊಂಡಾಗಿನಿಂದ ತುಮಕೂರಿನಲ್ಲಿ ಅನೇಕ ಅಪರಾಧಗಳನ್ನು ತಡೆಗಟ್ಟುವಲ್ಲಿ ಇವರ ಪಾತ್ರ ದೊಡ್ಡದಾಗಿದೆ. ಅಲ್ದೇ ಜನರಲ್ಲಿ ಭದ್ರತೆ ಹಾಗೂ ನಂಬಿಕೆಯನ್ನು ಮೂಡಿಸಿ ಸಾರ್ವಜನಿಕರ ಮೆಚ್ಚುಗೆಗೆ ಎಸ್‌ಪಿ ಅಶೋಕ್ ಪಾತ್ರರಾಗಿದ್ದು, ಈ ಪ್ರಶಸ್ತಿ ರಾಜ್ಯ ಮಟ್ಟದಲ್ಲಿ ಮಹತ್ವಪೂರ್ಣ ಮಾನ್ಯತೆ ಪಡೆದುಕೊಂಡಿದ್ದಾರೆ. ಎಸ್‌ಪಿ ಅಶೋಕ್ ಅವರ ಪರಿಶ್ರಮ, ನಿರಂತರ ಸೇವೆಗೆ ಪದಕ ಲಭಿಸಿದ್ದಕ್ಕೆ ಜಿಲ್ಲೆಯ ಜನ ಸಂತಸಗೊಂಡಿದ್ದಾರೆ.