GADAGA ಗದಗದಲ್ಲಿ ಸ್ವಾಮೀಜಿ ಕೊಠಡಿಗೆ ಬೀಗ ಹಾಕಿದ ಭಕ್ತರು

ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀ
ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀ
ಗದಗ

ಗದಗ: 

ಸ್ವಾಮೀಜಿ ಕೊಠಡಿಗೆ ಬಗ ಜಡಿದಿರುವ ಘಟನೆ ಗದಗದ ಆದರಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೇಶ್ವರದ ಆದಹಳ್ಳಿಯ ಗವಿಮಠದ ಶ್ರೀಗಳ ಕೊಠಡಿಗೆ ಬೀಗ ಹಾಕಿ ಭಕ್ತರು ಕಿಡಿಕಾರಿದ್ದಾರೆ.  ಗ್ರಾಮದಲ್ಲಿನ ಗವಿಸಿದ್ದೇಶ್ವರ ಮಠದ ಕಮಾರ ಮಹಾರಾಜ ಶ್ರೀಯನ್ನ ಭೋವಿ ಸಮುದಾಯದವರು ಹೊರಗೆ ಹಾಕಿದ್ದರೆ.ಗವಿಸಿದ್ದೇಶ್ವರ ಮಠದ ಕುಮಾರ ಮಹಾರಾಜ ಶ್ರೀ ಅವರು ಅಕ್ರಮ ಗಣಿಗಾರಿಕೆಯನ್ನು ಪ್ರಶ್ನಿಸಿ ಸುಮಾರು 14ಯುವಕರ ವಿರುದ್ಧ ಪೊಲೀಸರಿಗೆ ದೂರುಕೊಟ್ಟಿದ್ದರು. ಸ್ವಾಮೀಜಿ ತಂಗುವ ಕೊಠಡಿಗೆ ಬೀಗ ಜಡಿದು ಸ್ವಾಮೀಜಿ ನಮಗೆ ಬೇಡ. ಈ ಮಠಕ್ಕೆ ಈ ಸ್ವಾಮೀಜಿ ಯನ್ನು ನಾವೇ ಕರೆತಂದಿದ್ದೇವೆ. ಆದರೆ ನಮ್ಮ  ವಿರುದ್ಧವೇ ಸ್ವಾಮೀಜಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ  ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಸ್ವಾಮೀಜಿಯವರು ಗ್ರಾಮದ ಸೇವಾಲಾಲ್ ದೇವಸ್ಥಾನದಲ್ಲಿ ಬೆಂಬಲಿಗರೊಂದಿಗೆ ತಂಗಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ,ಮರಳು ದಂಧೆಯಿಂದ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆ ಆಗಿದೆ. ರೈತರ ಜಮೀನಿನಲ್ಲಿ ರಾತ್ರಿ  ಹೊತ್ತು ಅಕ್ರಮ ಚಟುವಟಿಕೆ ನಡೆಸಲಾಗುತ್ತಿದೆ. ಇದರಿಂದ ಬಿತ್ತಿ, ಬೆಳೆಯುವ ರೈತರ  ಭೂಮಿ ಹಾಳಾಗುತ್ತಿದೆ ಎಂದುಕುಮಾರ ಮಹಾರಾಜ ಶ್ರೀಗಳು ಆರೋಪಿಸಿದ್ದಾರೆ. ಭೋವಿ ಸಮಾಜದವರು ಶ್ರೀಯನ್ನು ಹೊರಗೆ ಹಾಕಿದ್ರೆ ಬಂಜಾರ ಸಮುದಾಯದವರು ಶ್ರೀಯನ್ನ ಮಠಕ್ಕೆ ಸೇರಿಸಲು ಪ್ರಯತ್ನ ಮಾಡುತ್ತಿದ್ದಾರೆ.ಇದರಿಂದ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬೆಂಬಲಿಗರನ್ನು ತಡೆದಿದ್ದಾರೆ.

Author:

...
Sub Editor

ManyaSoft Admin

share
No Reviews