ಇಂದು ದರ್ಶನ್ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ರಾಜ್ಯಾದ್ಯಂತ ಡಿ ಬಾಸ್ ಅಭಿಮಾನಿಗಳು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದೀಗ ಫ್ಯಾನ್ಸ್ಗೆ ಗುಡ್ ನ್ಯೂಸ್ ಸಿಕ್ಕಿದೆ. ಹುಟ್ಟುಹಬ್ಬದ ದಿನವೇ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಇತ್ತೀಚಿಗಷ್ಟೆ ನಟ ದರ್ಶನ್ ತಮ್ಮ ಅಭಿಮಾನಿಗಳಿಗಾಗಿ ವಿಡಿಯೋ ಒಂದನ್ನು ಮಾಡಿದ್ದರು. ಬೆನ್ನು ನೋವಿನ ಕಾರಣ ನನಗೆ ಹೆಚ್ಚು ಹೊತ್ತು ನಿಂತುಕೊಳ್ಳುವುದಕ್ಕೆ ಆಗುವುದಿಲ್ಲ. ಹೀಗಾಗಿ ಬರ್ತಡೇ ಸಂಭ್ರಮ ಬೇಡ. ದಯಮಾಡಿ ಅಭಿಮಾನಿಗಳು ಹುಟ್ಟುಹಬ್ಬದಂದು ಮನೆಯ ಬಳಿ ಬರುವುದು ಬೇಡ ಅಂದಿದ್ದರು. ಇದರಿಂದ ಅಸಮಾಧಾನಗೊಂಡ ಅಭಿಮಾನಿಗಳಿಗೆ ಡೆವಿಲ್ ಟೀಸರ್ ಬಿಡುಗಡೆಯ ಸುದ್ದಿ ಖುಷಿ ತಂದಿದೆ. ಟೀಸರ್ ಬಿಡುಗಡೆಗೆ ಮುನ್ನವೇ 'ಡೆವಿಲ್' ಸಿನಿಮಾದ ಟೈಟಲ್ನಲ್ಲಿ ಬದಲಾವಣೆಯಾಗಿತ್ತು. ಸಿನಿಮಾ ಸೆಟ್ಟೇರಿದಾಗ 'ಡೆವಿಲ್ ದಿ ಹೀರೋ' ಅಂತಿದ್ದ ಟೈಟಲ್ ಈಗ 'ದಿ ಡೆವಿಲ್' ಎಂದು ಬದಲಾವಣೆಯಾಗಿದೆ.
ಇನ್ನು ದರ್ಶನ್ ಟೀಸರ್ ರಿಲೀಸ್ ಆಗಿದೆ. ದರ್ಶನ್ ಕೊನೆಯ ಡೈಲಾಗ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಬರೀ ಆ್ಯಕ್ಷನ್ನಲ್ಲಿಯೇ ಡಿ ಬಾಸ್ ಮಾಸ್ ಆಗಿ ಉತ್ತರ ಕೊಟ್ಟಿದ್ದಾರೆ. ದರ್ಶನ್ ಫೈಟಿಂಗ್ ಸೀನ್, ಲುಕ್, ಆ್ಯಕ್ಷನ್, ಎಲ್ಲವೂ ಮಸ್ತ್ ಆಗಿದೆ ಎಂದು ಹೇಳ್ತಿದ್ದಾರೆ ದಚ್ಚು ಫ್ಯಾನ್ಸ್.
ಸದ್ಯ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಡೆವಿಲ್ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ದಾರೆ. ಮಿಲನ ಪ್ರಕಾಶ್ ಅವರು ನಿರ್ದೇಶನ ಮಾಡುತ್ತಿರುವ ದಿ ಡೆವಿಲ್ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಟೀಸರ್ ಮೂಲಕ ಆ ನಿರೀಕ್ಷೆಯನ್ನು ಡಬಲ್ ಮಾಡಲಾಗಿದೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಿರುವ ಈ ಟೀಸರ್ ಇದೀಗ ವೈರಲ್ ಆಗುತ್ತಿದೆ.