ದೇವನಹಳ್ಳಿ : ಓಲಾ, ಉಬರ್ ಸಂಸ್ಥೆಗಳ ವಿರುದ್ಧ ಏರ್ಪೋರ್ಟ್ ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ

ವಾಹನಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಟ್ಯಾಕ್ಸಿ ಚಾಲಕರು ಪ್ರತಿಭಟನೆ ಮಾಡಿರುವುದು.
ವಾಹನಗಳನ್ನ ರಸ್ತೆಯಲ್ಲಿ ನಿಲ್ಲಿಸಿ ಟ್ಯಾಕ್ಸಿ ಚಾಲಕರು ಪ್ರತಿಭಟನೆ ಮಾಡಿರುವುದು.
ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ :

ಓಲಾ, ಉಬರ್‌ ಕ್ಯಾಬ್‌ ಸಂಸ್ಥೆಗಳ ವಿರುದ್ಧ ಟ್ಯಾಕ್ಸಿ ಚಾಲಕರು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿನಿತ್ಯ ಸಾವಿರಾರು ಟ್ಯಾಕ್ಸಿಗಳು ಸಂಚಾರಿಸ್ತಾ ಇದಾವೆ, ಆದರೆ ಟ್ಯಾಕ್ಸಿಗಳ ಬಾಡಿಗೆಯಲ್ಲಿ ಅರ್ಧ ಹಣ ಆ್ಯಪ್ ಆಧಾರಿತ ಟ್ಯಾಕ್ಸಿ ಸಂಸ್ಥೆಯೇ ಪಡಿತೀದ್ದು, ಟ್ಯಾಕ್ಸಿಗಳಿಗೆ ಹೆಚ್ಚಿನ ಹಣ ಸಿಗ್ತಾ ಇಲ್ಲ. ಇನ್ನು ಟ್ಯಾಕ್ಸಿ ಚಾಲಕರು ಇದರ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕ್ಯಾಬ್ ಸಂಸ್ಥೆಯವರು ಸರಿಯಾಗಿ ಸ್ಪಂದಿಸದಿರೋದರಿಂದ ರೊಚ್ಚಿಗೆದ್ದ ಟ್ಯಾಕ್ಸಿ ಚಾಲಕರು ಪ್ರತಿಭಟನೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಟ್ಯಾಕ್ಸಿ ಚಾಲಕರ ಪ್ರತಿಭಟನೆಯಿಂದಾಗಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣ ಆಯ್ತು.

ಇನ್ನು ಪ್ರತಿಭಟನಾ ನಿರತ ಚಾಲಕರನ್ನು ಮನವೊಲಿಸಲು ಏರ್ಪೋರ್ಟ್ ಸಿಬ್ಬಂದಿ ಮತ್ತು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಪ್ರಯಾಣಿಕರು ಏರ್ಪೋರ್ಟ್‌ ಒಳಗಡೆ ಟ್ಯಾಕ್ಸಿಗಳಿಗಾಗಿ ಕಾದು ಕೆಲ ಕಾಲ ಕ್ಯೂ ನಿಲ್ಲುವ  ಪರಿಸ್ಥಿತಿ ಉಂಟಾಗಿತ್ತು,

Author:

share
No Reviews