TUMAKURU: ತುಮಕೂರಿನಲ್ಲಿ ಡೆಡ್ಲಿ ಆಕ್ಸಿಡೆಂಟ್...ಬೆಚ್ಚಿ ಬಿದ್ದ ಜನರು

ತುಮಕೂರು : 

ತುಮಕೂರು ನಗರದಲ್ಲಿ ತಡರಾತ್ರಿ ಡೆಡ್ಲಿ ಆಕ್ಸಿಡೆಂಟ್‌ ಸಂಭವಿಸಿದ್ದು, ನಿದ್ದೆಯಲ್ಲಿದ್ದವರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ತುಮಕೂರು ನಗರದ ಗಾರ್ಡನ್‌ ರಸ್ತೆಯಲ್ಲಿ ಫಾರ್ಚುನಲ್‌ ಕಾರು ವೇಗವಾಗಿ ಬಂದು ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ಮತ್ತೊಂದು ಬದಿಯಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಫಾರ್ಚುನಲ್‌ ಕಾರಿನಲ್ಲಿ ಐವರು ಇದ್ದು ಅಪಾಯದಿಂದ ಪಾರಾಗಿದ್ದಾರೆ.

ಇನ್ನು ಫಾರ್ಚುನಲ್‌ ಕಾರು ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್‌ ಕಂಬವೇ ಮುರಿದು ಬಿದ್ದಿದೆ. ಅಲ್ದೇ ಮತ್ತೊಂದು ಬದಿಯ ಕಾರಿಗೆ ಗುದ್ದಿದ್ದು ಆ ಕಾರು ಕೂಡ ಡ್ಯಾಮೇಜ್‌ ಆಗಿದ್ದು, ಡೆಡ್ಲಿ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತದ ಬಳಿಕ ಫಾರ್ಚುನಲ್‌ ಕಾರನ್ನು ಬಿಟ್ಟು ಐವರು ಎಸ್ಕೇಪ್‌ ಆಗಿದ್ದಾರೆ. ಫಾರ್ಚುನಲ್‌ ಕಾರು ಚಾಲಕ ಕುಡಿದ ಮತ್ತಲ್ಲಿ ಕರೆಂಟ್‌ ಕಂಬಕ್ಕೆ ಹಾಗೂ ಕಾರಿಗೆ ಗುದ್ದಿದ್ದಾನೆ ಎಂದು ಸ್ಥಳೀಯರು ಆರೋಪಿಸ್ತಾ ಇದ್ದಾರೆ. ಅಪಘಾತದಲ್ಲಿ ಕರೆಂಟ್‌ ಕಂಬ ನೆಲಕ್ಕೆ ಉರುಳುತ್ತಿದ್ದಂತೆ ಕಂರೆಂಟ್‌ ಕಟ್‌ ಮಾಡಿದ್ದು ಅದೃಷ್ಟಶಾತ್‌ ಯಾರಿಗೂ ತೊಂದ್ರೆ ಆಗಿಲ್ಲ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಜಮಾಯಿಸುವಷ್ಟರಲ್ಲಿ ಫಾರ್ಚುನಲ್‌ ಕಾರ್‌ ಚಾಲಕರು ಗಾಡಿಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್‌ ಆಗಿದೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 

Author:

share
No Reviews