ಕಲಬುರಗಿ :
ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಕಸ್ತೂರಿ ಬಾರ್ ನಲ್ಲಿ ನಡೆದಿದೆ.
22 ವರ್ಷದ ನಾಗೇಶ್ ಪಾತ್ರೆ ಎಂಬುವ ಯುವಕ ಮೃತ ದುರ್ದೈವಿಯಾಗಿದ್ದಾನೆ. ಆಳಂದ ಪಟ್ಟಣದಲ್ಲಿರುವ ಕಸ್ತೂರಿ ಬಾರ್ ನಲ್ಲಿ ಈ ಯುವಕನ ಮೃತದೇಹ ಅನುಮಾನಸ್ಪಾದ ರೀತಿಯಲ್ಲಿ ಕಂಡುಬಂದಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದಕ್ಕೆ ನಿಖರವಾದ ಕಾರಣ ತಿಳಿದಿಲ್ಲ, ಪೊಲೀಸರ ತನಿಖೆಯಿಂದಷ್ಟೇ ತಿಳಿಯಬೇಕಾಗಿದೆ. ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಳಂದ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.