CHIKKABALLAPURA: ಚಿಕ್ಕಬಳ್ಳಾಪುರ RTO ಅಧಿಕಾರಿಗಳಿಂದ ಹಗಲು ದರೋಡೆ

ಚಿಕ್ಕಬಳ್ಳಾಪುರ: 

ಚಿಕ್ಕಬಳ್ಳಾಪುರ ಜಿಲ್ಲೆಯ ಆರ್‌ಟಿಒ ಅಧಿಕಾರಿಗಳ ಕಳ್ಳಾಟ ಕೊನೆಗೂ ಬಯಲಾಗಿದ್ದು, ಕಾಂಚಣ ಕೊಟ್ರೆ ಮಾತ್ರ ಸೇಫ್‌ ಇಲ್ಲ ಅಂದ್ರೆ ಗಾಡಿಗಳು ಸೀಜ್‌ ಆಗೋದು ಪಕ್ಕಾ ಆಗಿದೆ.  ಆರ್‌ಟಿಓ ಅಧಿಕಾರಿಗಳ ಲಂಚಾವತಾರದ ವಿಡಿಯೋ ಸೆರೆಯಾಗಿದ್ದು ಸೋಶಿಯಲ್‌ ಮಿಡಿಯಾದಲ್ಲಿ ಫುಲ್‌ ವೈರಲ್‌ ಆಗಿದೆ.

ಚಿಕ್ಕಬಳ್ಳಾಪುರ ಆರ್‌ಟಿಒ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿದ್ದು, ಒಂದು ಲಾರಿಗೆ ಸುಮಾರು 400 ರೂಪಾಯಿಯಿಂದ 1 ಸಾವಿರ ವರೆಗೂ ಫಿಕ್ಸ್‌ ಮಾಡಿದ್ದಾರಂತೆ. ಚಿಕ್ಕಬಳ್ಳಾಪುರ ನೆರೆಯ ಆಂಧ್ರ, ತಮಿಳುನಾಡು ಗಡಿಯನ್ನು ಹೊಂದಿಕೊಂಡಿದ್ದು ನಿತ್ಯ ಗಡಿ ಪ್ರದೇಶದಿಂದ ಸಾವಿರಾರು ವಾಹನಗಳು ಚಿಕ್ಕಬಳ್ಳಾಪುರ ಗಡಿ ಪ್ರದೇಶದಿಂದ ಬರ್ತಾ ಇರ್ತಾವೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡ ಆರ್‌ಟಿಒ ಅಧಿಕಾರಿಗಳು ಬಾಗೇಪಲ್ಲಿ ಟೋಲ್‌ ಬಳಿ ಗಾಡಿಗಳನ್ನು ಚೆಕ್‌ ಮಾಡ್ತಾ, ವಸೂಲಿಗೆ ಇಳಿದಿದ್ರು. ಲಾರಿ ಚಾಲಕರಿಗೆ ಇಷ್ಟು ಅಮೌಂಟ್‌ ಕೊಡಲೇಬೇಕು ಅಂತಾ ಡಿಮ್ಯಾಂಡ್‌  ಇಡ್ತಾ ಇದ್ದಾರೆ. ಆರ್‌ಟಿಒ ಕಚೇರಿಗೆ ಹೋಗಿ ಹೇಳಿದಷ್ಟು ಅಮೌಂಟ್‌ ಕೊಟ್ರೆ ಗಾಡಿಯನ್ನು ಬಿಟ್ಟು ಕಳುಹಿಸುತ್ತಾರೆ, ಇಲ್ಲವಾದ್ರೆ ಸೀಜ್‌ ಮಾಡ್ತಾರೆ ಎನ್ನಲಾಗಿದೆ.

ಇನ್ನು ಇದಿಷ್ಟು ಅಲ್ಲದೇ ಒಂದು ವೇಳೆ ಲಾರಿ ಚಾಲಕರು ದುಡ್ಡು ಕೊಡದೇ ಎಸ್ಕೇಪ್‌ ಆಗಲು ಯತ್ನಿಸಿದ್ರೆ ಆರ್‌ಟಿಒ ಅಧಿಕಾರಿಗಳು ಚೇಸ್‌ ಮಾಡಿಕೊಂಡು ಹೋಗಿ ಬರೋಬ್ಬರಿ 20 ಸಾವಿರ ಫೈನ್‌ ಹಾಕ್ತಾರೆ ಅಂತೆ. ವಸೂಲಿಗೆ ಇಳಿದಿದ್ದ ಆರ್‌ಟಿಒ ಅಧಿಕಾರಿಗೆ ಚಾಲಕ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಜೊತೆಗೆ ಸುದ್ದಿ ಮಾಡದಂತೆ ಮಾಧ್ಯಮಗಳಿಗೂ ರೇಟ್ ಫಿಕ್ಸ್‌ ಮಾಡಿರೋದು ಬೆಳಕಿಗೆ ಬಂದಿದೆ.

ಆರ್‌ಟಿಒ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿದ್ದು, ಕೂಡಲೇ ಮೇಲಾಧಿಕಾರಿಗಳು ಎಚ್ಚೆತ್ತು ಕೊಂಡು ಅಧಿಕಾರಿಗಳ ವಸೂಲಾತಿಗೆ ಬ್ರೇಕ್‌ ಹಾಕಬೇಕಿದೆ.

Author:

...
Sub Editor

ManyaSoft Admin

share
No Reviews