ದಾವಣಗೆರೆ : ಕಮಿಷನ್‌ ಆಸೆ ತೋರಿಸಿ ಯುವತಿಗೆ ವಂಚನೆ

ದಾವಣಗೆರೆ : ಆನ್ಲೈನ್‌ ಲಾಭದ ಆಸೆ ತೋರಿಸಿ ಯುವತಿಗೆ ₹13 ಲಕ್ಷ ರೂ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಟೆಲಿಗ್ರಾಂ  ಮೂಲಕ ಪರಿಚಯವಾದ ಮಹಿಳೆಯೋರ್ವಳು ಕಮಿಷನ್‌ ಆಸೆ ತೋರಿಸಿ ದಾವಣಗೆರೆಯ ಎಂಸಿಸಿ ಬ್ಲಾಕ್‌ ನಲ್ಲಿ ವಾಸವಾಗಿದ್ದ  ಹರಿಯಾಣ ಮೂಲದ 26 ವರ್ಷದ ಯುವತಿಗೆ ವಂಚಿಸಿದ್ದಾಳೆ.

ಟೆಲಿಗ್ರಾಮ್ ಮೂಲಕ ಪರಿಚಯವಾಗಿದ್ದ ಮಹಿಳೆಯೊಬ್ಬಳು, ಕಮಿಷನ್ ಆಸೆ ತೋರಿಸಿ ಯುವತಿಗೆ ಹಣ ಹೂಡಿಕೆ ಮಾಡುವಂತೆ ಹೇಳಿದ್ದಳು. ಅಲ್ಲದೇ ಯುವತಿಗೆ ಉದ್ಯೋಗ ಕೊಡಿಸುವುದಾಗಿಯೂ ಭರವಸೆ ನೀಡಿದ್ದಳು. ಅಲ್ಲದೇ "ಕೆಲಸ ಮಾಡಿದಷ್ಟು ಹಣ ಹಾಗೂ ಹೆಚ್ಚುವರಿ ಕಮಿಷನ್" ಎಂದು ಹೇಳಿ, ಹಂತ ಹಂತವಾಗಿ ಬ್ಯಾಂಕ್‌ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ ನಂತರ ಯುವತಿಯು ಒಟ್ಟು ₹13,00,000 ರೂಪಾಯಿ ವರ್ಗಾವಣೆ ಮಾಡಿದ್ದಾರೆ.

ಹಣ ಬಿಡಿಸಿಕೊಳ್ಳಲು ಹೋದ ವೇಳೆ, ಯುವತಿಗೆ ವಂಚನೆಯಾಗಿರುವುದು ಗೊತ್ತಾಗಿದೆ. ಕೂಡಲೇ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Author:

...
Sushmitha N

Copy Editor

prajashakthi tv

share
No Reviews