GUBBI: ಜಿಲ್ಲಾ ಪಂಚಾಯ್ತಿ CEO ವಿರುದ್ಧ ದಲಿತ ಮುಖಂಡರ ಆಕ್ರೋಶ

ಪತ್ರಿಕಾಗೋಷ್ಠಿ
ಪತ್ರಿಕಾಗೋಷ್ಠಿ
ತುಮಕೂರು

ಗುಬ್ಬಿ: 

ತುಮಕೂರು ಜಿಲ್ಲೆಯಲ್ಲಿ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕಾದ ಸಿ.ಇ.ಓ ಜಿ.ಪ್ರಭು ಅಸ್ಪೃಶ್ಯತೆಯನ್ನು ಜೀವಂತವಾಗಿಡಲುತಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸುವ ದಲಿತ ನೌಕರರನ್ನೇ ಗುರಿಯಾಗಿಸಿಕೊಂಡು ಕ್ರಮಕ್ಕೆ ಮುಂದಾಗಿರೋದು ಸರಿಯಲ್ಲ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಗನ್ನಾಥ್‌ ಕಿಡಿಕಾರಿದ್ರು. ದಲಿತ ವಿರೋಧಿ ಧೋರಣೆ ವಿರೋಧಿಸಿ ಗುಬ್ಬಿಯಲ್ಲಿ ದಲಿತ ಮುಖಂಡರು ಸುದ್ದಿಗೋಷ್ಠಿ ನಡೆಸುವ ಮೂಲಕ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಜಗನ್ನಾಥ್‌,  ಸಿ.ಇ.ಓ ಪ್ರಭುರವರು ಸ್ವ ಜಾತಿಯವರ   ಓಲೈಕೆಗೆ ಮುಂದಾಗಿ ರಕ್ಷಣೆ ಮಾಡುವ ಭರದಲ್ಲಿ ವಿನಾಕಾರಣ ದಲಿತ ಅಧಿಕಾರಿಗಳ ಮೇಲೆ ಸಲ್ಲದ ಆರೋಪ ಮಾಡ್ತಿದ್ದಾರೆ. ಹೀಗೆ ಮಾಡಿದ್ರೆ ಮುಂದಿನ ದಿನಗಳಲ್ಲಿ ಉಗ್ರವಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.

ದಲಿತ ಮುಖಂಡ ಚನ್ನಬಸವಣ್ಣ ಮಾತನಾಡಿ, ಸಿ.ಇ.ಓ ಜಿ.ಪ್ರಭು ರವರೇ ನೀವೇನು ಸತ್ಯ ಹರಿಶ್ಚಂದ್ರರೇ.? ಕಛೇರಿ ಕೆಲಸ ಮುಗಿದ ಮೇಲೆ ಏನೆಲ್ಲಾ ಮಾಡುತ್ತೀರಿ ಎಂಬುದು ಎಲ್ಲಾ ತಿಳಿದಿದೆ ಎಲ್ಲದನ್ನೂ ಹೇಳುವ ಮುನ್ನ ಎಚ್ಚೆತ್ತುಕೊಳ್ಳದೆ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು  ಆಕ್ರೋಶ ವ್ಯಕ್ತಪಡಿಸಿದರು.

 

Author:

share
No Reviews