DALI DHANANJAY: ಜೇನುಕಲ್‌ ಸಿದ್ದೇಶ್ವರ ಸ್ವಾಮಿಯ ಕೊಂಡ ತುಳಿದ ಡಾಲಿ ಧನಂಜಯ್

ಡಾಲಿ ಧನಂಜಯ್‌ ಅವರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕೊಂಡವನ್ನು ತುಳಿಯುತ್ತಿರುವುದು.
ಡಾಲಿ ಧನಂಜಯ್‌ ಅವರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕೊಂಡವನ್ನು ತುಳಿಯುತ್ತಿರುವುದು.
ಕನ್ನಡ

ನಟ ಡಾಲಿ ಧನಂಜಯ ಅವರ ಮನೆಯಲ್ಲಿ ಮದುವೆ ಶಾಸ್ತ್ರಗಳು ಆರಂಭವಾಗಿದೆ. ಒಂದೊಂದೆ ಮದುವೆ ಕಾರ್ಯಗಳನ್ನು ಮಾಡಲಾಗುತ್ತಿದೆ. ಸಂಪ್ರದಾಯದಂತೆ  ಧನಂಜಯ್‌ ಅವರು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದೇವರ ಕೊಂಡ ತುಳಿದಿದ್ದಾರೆ.

ಡಾಲಿರವರ ಹುಟ್ಟೂರು ಕಾಳೇನಹಳ್ಳಿಯಲ್ಲಿ ಮದುವೆ ಸಂಭ್ರಮ ಮನೆಮಾಡಿದೆ. ಈ ಹಿನ್ನೆಲೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಸುಪ್ರಸಿದ್ಧ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಕೊಂಡವನ್ನು ಧನಂಜಯ್‌ ತುಳಿದಿದ್ದಾರೆ. ಧನಂಜಯ ಅವರು ಬೆಂಕಿಯ ಕೆಂಡಗಳಲ್ಲಿ ಬರಿಗಾಲಿನಲ್ಲೇ ಓಡಿದ್ದಾರೆ. ಈ ವೇಳೆ ಸಾಕಷ್ಟು ಜನರು ಧನಂಜಯ ಅವರ ಕೊಂಡ ಹಾಯುವಿಕೆಯನ್ನು ನೋಡುತ್ತಿದ್ದರು.

ಕೊಂಡ ತುಳಿದು ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.   ನಂತರ ಮನೆಯಲ್ಲಿ ಮನೆ ದೇವರ ಪೂಜೆಯನ್ನು ಭಕ್ತಿಯಿಂದ ಮಾಡಿದ್ದಾರೆ. ಡಾಲಿ ಹಾಗೂ ಧನ್ಯತಾ ಅವರು ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ವಿವಾಹವಾಗಲಿದ್ದಾರೆ. ಮದುವೆಗೆ ​ರಾಜಕಾರಣಿಗಳು, ಗಣ್ಯರು, ಸ್ಯಾಂಡಲ್​ವುಡ್​ ಸ್ಟಾರ್ಸ್ ಸೇರಿದಂತೆ ಎಲ್ಲರನ್ನೂ  ಆಹ್ವಾನಿಸಿದ್ದಾರೆ. ಅಭಿಮಾನಿಗಳಿಗೂ ಮದುವೆಗೆ ಬರುವ ಅವಕಾಶವಿದೆ.

 

 

Author:

share
No Reviews