ದಕ್ಷಿಣ ಕನ್ನಡ : ಬೀದರ್ ಬಳಿಕ ಕರಾವಳಿಯಲ್ಲೂ ಬಂದೂಕು ತೋರಿಸಿ 12 ಕೋಟಿ ಲೂಟಿ

ಕೋಟೆಕಾರ್‌ ಬ್ಯಾಂಕ್‌
ಕೋಟೆಕಾರ್‌ ಬ್ಯಾಂಕ್‌
ದಕ್ಷಿಣ ಕನ್ನಡ

ದಕ್ಷಿಣ ಕನ್ನಡ : ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದ ಸಿಬ್ಬಂದಿಯನ್ನು ಹಾಡಹಗಲೇ ದರೋಡೆಕೋರರು ಶೂಟ್‌ ಮಾಡಿ 93 ಲಕ್ಷ ರಾಬರಿ ಮಾಡಿ ಎಸ್ಕೇಪ್‌ ಆಗಿದ್ದ ಘಟನೆ ಬೆನ್ನಲ್ಲೇ , ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲೂ ದರೋಡೆಕೋರರು ರಾಬರಿ ಮಾಡಿದ್ದಾರೆ. 

ಬೀದರ್‌ನಲ್ಲಿ ಘಟನೆ ನಡೆದ ಒಂದು ದಿನದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೆಸಿ ರೋಡ್‌ ನ ಕೋಟೆಕಾರ್‌ ಬ್ಯಾಂಕ್‌ಗೆ ಸಿನಿಮಾ ಸ್ಟೈಲ್‌ನಲ್ಲಿ ನುಗ್ಗಿದ ಐವರು ಮಸುಕುಧಾರಿಗಳು ಬ್ಯಾಂಕ್‌ ಸಿಬ್ಬಂದಿ, ಅಧಿಕಾರಿಗಳಿಗೆ ಬಂದೂಕು ತೋರಿಸಿ ಚಿನ್ನಾಭರಣ, ನಗದನ್ನು ಐದಾರು ಮೂಟೆಗಳಲ್ಲಿ ತುಂಬಿಕೊಂಡು ಎಸ್ಕೇಪ್‌ ಆಗಿದ್ದಾರೆ.  ಈ ಖದೀಮರು 12 ಕೋಟಿ ಹಣವನ್ನು ಕೇವಲ 4 ನಿಮಿಷದಲ್ಲೇ ದೋಚಿರುವುದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಮಂಗಳೂರಿಗೆ ಸಿಎಂ ಆಗಮಿಸಿದ್ದರಿಂದ ಭದ್ರತೆಗೆ ಪೊಲೀಸರು ತೆರಳಿದ್ದರು. ಇದನ್ನೇ ಟಾರ್ಗೆಟ್‌ ಮಾಡಿದ ಖದೀಮರು ಫಿಯೇಟ್‌ ಕಾರಿನಲ್ಲಿ ಬಂದ ದರೋಡೆಕೋರರು ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಕೆ.ಸಿ ರೋಡ್‌ ಜಂಕ್ಷನ್‌ನಲ್ಲಿ ಮುಂಸ್ಲಿಂ ಬಾಂಧವರು ಹೆಚ್ಚಾಗಿದ್ದರಿಂದ  ಇಂದು ಶುಕ್ರವಾರವಾಗಿದ್ದರಿಂದ ನಮಾಜ್‌ಗೆ ಹೋಗುವದನ್ನೇ ಕಾದು ಹೊಂಚಾಕಿದ್ದ ದುಷ್ಕರ್ಮಿಗಳು ಬ್ಯಾಂಕ್‌ ಒಳಗೆ ನುಗ್ಗಿದರು. ಸಿಸಿ ಕ್ಯಾಮೆರಾವನ್ನು ಇಂದೇ ರಿಪೇರಿಗೆ ಕೊಡಲಾಗಿತ್ತು. ಇಂತಹ ಸಮಯಕ್ಕೆ ಕಾದಿದ್ದ ಕಳ್ಳರು 12 ಕೋಟಿ ದೋಚಿಕೊಂಡು ಪರಾರಿಯಾಗಿದ್ದಾರೆ.

ರಾಬರಿ ಆಗ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು, ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ದರೋಡೆಕೋರಿಗಾಗಿ ಬಲೆಬೀಸಿದ್ದಾರೆ. ಹಾಗೂ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡ ರಚನೆಗೆ ಸ್ಪೀಕರ್‌ ಯು.ಟಿ ಖಾದರ್‌ ಸೂಚನೆ ನೀಡಿದ್ದಾರೆ.

Author:

share
No Reviews