ನೆಲಮಂಗಲ
ಇದ್ದಕ್ಕಿದ್ದ ಹಾಗೆ ಮನೆಯಲ್ಲಿ ಹೊತ್ತಿಕೊಂಡಿರೋ ಬೆಂಕಿ… ಬೆಂಕಿಯಿಂದ ತಪ್ಪಿಸಿಕೊಳ್ಳಲು ರೋಡಿಗೆ ಓಡೋಡಿ ಬಂದು ಕಾಪಾಡಿ ಕಾಪಾಡಿ ಎಂದು ಕೂಗಾಡುತ್ತಿರೋ ಮನೆಯವರು.. ಮನೆಯಲ್ಲಿ ಆವರಿಸಿರೋ ಬೆಂಕಿಯನ್ನು ನಂದಿಸಲು ಪರದಾಡ್ತಿರೋ ಜನರು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರು ಹೊರಹೊಲಯ ನೆಲಮಂಗಲದ ಅಡಕಮಾರನಹಳ್ಳಿಯಲ್ಲಿ.
ಎಂದಿನಂತೆ ಕೆಲಸಕ್ಕೆ ಹೋಗುವ ವೇಳೆ ದೇವರಿಗೆ ದೀಪ ಹಚ್ಚುವುದು ವಾಡಿಕೆ, ಅದೇ ರೀತಿ ದೇವರಿಗೆ ದೀಪ ಹಚ್ಚುವ ವೇಳೆ ಗ್ಯಾಸ್ ಲೀಕೇಜ್ ಆಗಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನಗೊಂಡ್ರೆ, ನಾಲ್ವರಿಗೆ ಗಂಭಿರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸಿಲಿಂಡರ್ ಸ್ಫೋಟದಿಂದ ನಾಗರಾಜ್, ಶ್ರೀನಿವಾಸ್ ಸಜೀವದಹನಗೊಂಡ್ರೆ, ಅಭಿಷೇಕ್, ಶಿವಶಂಕರ್, ಲಕ್ಷ್ಮೀದೇವಿ ಮತ್ತು ಬಸವನಗೌಡಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಳ್ಳಾರಿ ಮೂಲದ ನಾಗರಾಜ್ ಕುಟುಂಬ ಒಂದು ಮನೆಯಲ್ಲಿ ಬಾಡಿಗೆಗೆ ಇದ್ರು. ಬೆಳಗ್ಗೆ ಕೆಲಸಕ್ಕೆ ತೆರಳುವಾಗ ನಾಗರಾಜ್ ದೇವರ ಮುಂದೆ ದೀಪ ಹಚ್ಚಿದ್ದರು. ಈ ವೇಳೆ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮಗ ಅಭಿಷೇಕ್ ಮುಂದಾಗಿದ್ದ. ಅಜಾಗರೂಕತೆಯಿಂದ ಸಿಲಿಂಡರ್ ಫಿಟ್ ಮಾಡುತ್ತಿದ್ದ ವೇಳೆ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ತಗುಲಿದೆ. ಮನೆ ಧಗಧಗ ಹೊತ್ತಿಉರಿದಿದ್ದು, ಬೆಂಕಿಗೆ ಸಿಲುಕಿ ನಾಗರಾಜ್ ಹಾಗೂ ಶ್ರೀನಿವಾಸ್ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ನಾಗರಾಜ್ ಪತ್ನಿ ಲಕ್ಷ್ಮಿ ದೇವಿ , ಮಕ್ಕಳಾದ ಬಸನಗೌಡ, ಅಭಿಷೇಕ್ ಗೌಡ ಹಾಗೂ ಶಿವಶಂಕರ್ ಮನೆಯಿಂದ ಓಡಿ ಬಂದು ಸ್ಥಳೀಯರಿಂದ ರಕ್ಷಣೆ ಕೋರಿದ್ದಾರೆ. ಇನ್ನು ಪಕ್ಕದ ಮನೆಯಲ್ಲಿದ್ದ ಶ್ರೀನಿವಾಸ್ ಹಾಗೂ ಮನೆ ಮಾಲೀಕ ಶಿವಶಂಕರ್ ಬೆಂಕಿ ಹಾರಿಸಲು ಮುಂದಾಗಿದ್ದು ಶ್ರೀನಿವಾಸ್ ಕೂಡ ಪ್ರಾಣ ತ್ಯಾಗ ಮಾಡಿದ್ರೆ, ನಾಗರಾಜ್ ಸ್ಥಿತಿ ಗಂಭೀರ ವಾಗಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಒಟ್ಟಾರೆ ಸಿಲಿಂಡರ್ ಬಲಾವಣೆ ವೇಳೆ ತೋರಿಸ ಅಜಾಗುರುಕತೆಯಿಂದಾಗಿ ಇಬ್ಬರು ಸಾವಿಗೆ ಶರಣಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬದಲಾವಣೆ ವೇಳೆ ಜನರು ಜಾಗರೂಕತೆಯಿಂದ ಇರಬೇಕಿದೆ.