ಶಿರಾ:
ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗಳ ಬಗ್ಗೆ ನಿಮ್ಮ ಪ್ರಜಾಶಕ್ತಿ ಮಾಧ್ಯಮ ವರದಿ ಮಾಡುತ್ತಲೇ ಇದ್ದು ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಮಾತ್ರ ಸರಿ ಹೋಗ್ತಾ ಇಲ್ಲ. ಹೌದು ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದೇ ವೈದ್ಯರು ಪರದಾಡುವಂತಾಗಿದೆ. ಆಸ್ಪತ್ರೆಯಲ್ಲಿ ಕರೆಂಟ್ ಇಲ್ಲದೇ ವೈದ್ಯರು, ನರ್ಸ್ಗಳು ಚಿಕಿತ್ಸೆ ನೀಡಲು ಮೊಬೈಲ್ ಟಾರ್ಚ್ ಮೊರೆ ಹೋಗಿದ್ದಾರೆ. ಸ್ಥಳೀಯರು ಸರ್ಕಾರದ ವಿರುದ್ದ ಹಿಡಿಶಾಪ ಹಾಕಿದರು.
ಶಿರಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವೈದ್ಯರು ಮೊಬೈಲ್ ಲೈಟ್ ಬಳಸಿ ಚಿಕಿತ್ಸೆ ನೀಡುತ್ತಿರೋದು ಕಂಡು ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ, ಕರೆಂಟ್ ಬ್ಯಾಕಪ್ ಕೊರತೆಯಿಂದಾಗಿ ಸರ್ಕಾರಿ ಆಸ್ಪತ್ರೆ ಇರೋ ಏರಿಯಾದಲ್ಲಿ ಕತ್ತಲೆ ಆವರಿಸಿತ್ತು. ಹೀಗಾಗಿ ಸುಮಾರು ಅರ್ಧಗಂಟೆಗಳ ಕಾಲ ವೈದ್ಯರು ಮೊಬೈಲ್ ಲೈಟ್ ಬಳಸಿಯೇ ಚಿಕಿತ್ಸೆ ನೀಡುವಂತಾಯಿತು.
ವಿದ್ಯುತ್ ವ್ಯತ್ಯಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಕತ್ತಲೆಯಲ್ಲಿ, ಮೊಬೈಲ್ ಲೈಟ್ನಲ್ಲಿ ಚಿಕಿತ್ಸೆ ನೀಡ್ತಾ ಇರೋ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬಂದಿವೆ.