CSK vs PBKS :
ಸತತ ಸೋಲುಗಳಿಂದ ಕಂಗೆಟ್ಟಿರೋ ಚೆನ್ನೈ ಸೂಪರ್ ಕಿಂಗ್ಸ್ ಇಂದು ಪಂಜಾಬ್ ಕಿಂಗ್ಸ್ ವಿರುದ್ದ ಸೆಣೆಸಾಡಲಿದೆ. ಸಿಎಸ್ ಕೆ ತಂಡ ಇಂದು ಚೆಪಾಕ್ ನ ಚಿದಂಬರಂ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಪಂದ್ಯ ಆಡಲಿದ್ದು, ಈ ಪಂದ್ಯವನ್ನು ಗೆದ್ದರೆ ಮಾತ್ರ ಪಂಜಾಬ್ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ನ ಈ ಸೀಸನ್ ನಲ್ಲಿ ಚೆನ್ನೈ ತಂಡದ ಪ್ಲೇ ಆಫ್ ಪ್ರವೇಶದ ಹಾದಿ ಈಗಾಗಲೇ ಬಹುತೇಕ ಮುಚ್ಚಿದೆ. ಆದ್ದರಿಂದ ಈ ಪಂದ್ಯದಲ್ಲಿ ಗೆಲುವಿನ ವಿಶ್ವಾಸದೊಂದಿಗೆ ಧೋನಿ ಪಡೆ ಕಣಕ್ಕಿಳಿಯುತ್ತಿದೆ. ಐದು ಬಾರಿ ಚಾಂಪಿಯನ್ಸ್ ಆಗಿರೋ ಸಿಎಸ್ ಕೆ ಈ ಬಾರಿ ನಿರಾಶಾದಾಯಕ ಪ್ರದರ್ಶನ ನೀಡುತ್ತಾ ಬಂದಿದ್ದು ಅಷ್ಟಕಷ್ಟೇ ಎಂಬಂತಾಗಿದೆ. ಆಡಿರೋ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯವನ್ನ ಮಾತ್ರ ಗೆದ್ದಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ತಂಡ ಬಲಿಷ್ಠವಾಗಿದ್ದು, ಉತ್ತಮ ಫಾರ್ಮ್ ನಲ್ಲಿದೆ.
ಪಂಜಾಬ್ ಕಿಂಗ್ಸ್ ತಂಡ ಈವರೆಗೆ ಆಡಿದ 9 ಪಂದ್ಯಗಳಿಂದ 11 ಅಂಕಗಳನ್ನು ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಚೆನ್ನೈಗಿಂತ ಉತ್ತಮ ಸ್ಥಾನದಲ್ಲಿದೆ. ಈಗಾಗಾಲೇ ನಾಲ್ಕು ತಂಡಗಳು ಪ್ಲೇ ಆಫ್ ಸ್ಪರ್ಧೆಯಲ್ಲಿ ಪೈಪೋಟಿಯಲ್ಲಿರೋ ಕಾರಣ ಪಂಜಾಬ್ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಅಲ್ಲದೇ ಮನೆಯಂಗಳದಲ್ಲೇ ಮುಗ್ಗರಿಸ್ತಿರೋ ಸಿಎಸ್ ಕೆ ಇದುವರೆಗೂ ಉತ್ತಮ ಪ್ರದರ್ಶನವನ್ನು ಸಹ ನೀಡಿಲ್ಲ. ಇನ್ನು ತಂಡವನ್ನು ಯಶಸ್ವಿನತ್ತ ಮುನ್ನಡೆಸಲು ಸಾಧ್ಯವಾಗದಿರೋದು ಸದ್ಯ ಸಿಎಸ್ ಕೆ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ಸ್ಪಿನ್ನರ್ ಗಳಿಗೆ ಸಹಾಯ ಮಾಡುವ ಚೆಪಾಕ್ ಪಿಚ್ ನಲ್ಲಿ ಯಾರು ಮಿಂಚ್ತಾರೆ ಎಂಬುದೇ ಅಭಿಮಾನಿಗಳಲ್ಲಿ ಮೂಡ್ತಿರುವ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಸಿಎಸ್ ಕೆ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಯಾವ ತಂಡ ಗೆದ್ದು ಪ್ಲೇ ಆಫ್ ಹಾದಿಯನ್ನು ತಲುಪುತ್ತೇ ಎಂಬುದನ್ನು ಕಾದುನೋಡಬೇಕಿದೆ.