ಚಿಕ್ಕಬಳ್ಳಾಪುರ:
ನಮ್ಮ ನಾಡಲ್ಲಿ ಗೋಮಾತೆಗೆ ಪೂಜ್ಯ ಸ್ಥಾನವಿದೆ. ಹಿಂದೂಗಳು ಗೋ ಮಾತೆಯನ್ನು ಪೂಜಿಸುತ್ತಾರೆ.. ಆ ಗೋವುಗಳನ್ನೇ ಕಾಳ ಸಂತೆಯಲ್ಲಿ ತಂದು ಸರ್ಕಾರಿ ಕೆರೆಯ ಜಾಗವನ್ನು ಆಕ್ರಮಿಸಿ ಶೇಡ್ ಹಾಕಿಕೊಂಡು ಆಕ್ರಮವಾಗಿಗೋವುಗಳನ್ನು ಕಡಿದು ಮಾರಾಟ ಮತ್ತು ರಪ್ತು ಮಾಡುವುದಲ್ಲದೆ, ತಲೆ ಬುರುಡೆಗಳನ್ನು ಕೆರೆಗೆ ಬಿಸಾಡುವುದಲ್ಲದೆ. ಹಿಂದೂ ದೇವಾಲಯದಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿರುವುದು ದಕ್ಕೆ ತರುವಂತ ಕೆಲಸ ಮಾಡಿದ್ದಾರೆ. ಈ ಒಂದು ದಾರುಣ ಘಟನೆಗೆ ಸಾಕ್ಷಿಯಾಗಿರೋದು ಚಿಕ್ಕಬಳ್ಳಾಪುರ ತಾಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿ.
ಚಿಕ್ಕಬಳ್ಳಾಪುರ ಜಿಲ್ಲೆ ಕುಪ್ಪಹಳ್ಳಿ ಗ್ರಾಮದ ಕೆರೆಯಂಚಿನಲ್ಲಿ ಹಿಂದೂಗಳೆ ಆಕ್ರಮ ಗೋವುಗಳನ್ನು ಕಡೆದು ಮಾರಟ ಮತ್ತು ಬೇರೆ ನಗರಗಳಿಗೆ ರಪ್ತು ಮಾಡುವ ಆರೋಪ ಕೇಳಿ ಬಂದಿದೆ, ಕುಪ್ಪಹಳ್ಳಿ ಗ್ರಾಮದ ಸುರೇಶ್ ಕೆರೆಯ ಜಾಗವನ್ನು ಆಕ್ರಮಿಸಿ ಶೇಡ್ ನಿರ್ಮಾಣ ಮಾಡಿಕೊಂಡು ಕಾಳಸಂತೆಯಲ್ಲಿ ತಂದ ಗೋವುಗಳನ್ನು ಆಕ್ರಮವಾಗಿ ಕಡೆದು ಮಾರಾಟ ಮತ್ತು ರಫ್ತು ಮಾಡುತ್ತಿದ್ದರು. ಗೋವುಗಳ ತಲೆ ಕಡೆದ ಬುರುಡೆಗಳನ್ನು, ಕೊಂಬುಗಳನ್ನು, ಗೋವುಗಳಿಂದ ಬಂದ ವೇಸ್ಟ್ ಮಾಂಸವನ್ನು ಕೆರೆಗೆ ಬಿಸಾಡುತ್ತಿದ್ದರು.
ಅದಲ್ಲದೇ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುವ ಜಾಗಕ್ಕೆ ಹಿಂದೂ ದೇವಾಲಯದಿಂದ ಆಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡು ಸೌಲಭ್ಯ ಪಡೆಯುತ್ತಿದ್ದರು.. ಇಷ್ಟೇಲ್ಲಾ ಆಕ್ರಮ ಗೋಮಾಂಸದ ದಂಧೆ ನಡೆಯುತ್ತಿದ್ದರು ಕೂಡ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ಕಣ್ ಮುಚ್ಚಿ ಕುಳಿತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಕುಪ್ಪಹಳ್ಳಿ ಗ್ರಾಮದ ಸರ್ಕಾರಿ ಜಾಗದ ಕೆರೆಯ ಅಂಗಳದಲ್ಲಿ ಸುರೇಶ್ ಎಂಬುವವರು ಆಕ್ರಮ ಗೋಮಾಂಸದ ಧಂದೆ ನಡೆಸುತ್ತಿರುವ ವಿಚಾರ ಸಾಮಾಜಿಕ ಕಾರ್ಯಕರ್ತ ತ್ಯಾಗರಾಜ್ ಬಯಲಿಗೆ ತಂದಿದ್ದಾರೆ. ಅಲ್ಲದೆ ಆಕ್ರಮ ಗೋಮಾಂಶದ ಬಗ್ಗೆ ನಂದಿ ಪೋಲಿಸ್ರರಿಗೆ ಮಾಹಿತಿ ನೀಡಿದ್ದಾರೆ..ಸ್ಥಳಕ್ಕೆ ಬಂದ ಪೋಲಿಸ್ರು ಕುಪ್ಪಹಳ್ಳಿ ಗ್ರಾಮದ ಸುರೇಶ್ ನೂರಾರು ಸಹಚರರು ಬಂದು ಪೋಲಿಸ್ರಿಗೆ ಗೋ ಮಾಂಸ ಮಾರಾಟ ಮಾಡಿದ್ರೆ ತಪ್ಪೇನಿದೆ ಎಂಬ ಪ್ರಶ್ನೆಗಳು ಹಾಕಿದ್ದಾರೆ..? ಅದ್ರೂ ಶೇಡ್ ನಲ್ಲಿ ಮಾರಾಟಕ್ಕೆ ಇಟ್ಟಿದ್ದುದೃಢವಾಗಿದೆ. ಪೋಲಿಸ್ರ ಜೊತೆ ಪಶು ಆರೋಗ್ಯ ಇಲಾಖೆಯ ಅಧಿಕಾರಿಗಳು ಬಂದು 300ಕ್ಕೂ ಅಧಿಕ ಗೋಮಾಂಸವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಟ್ಟಾರೆ ಆಕ್ರಮವಾಗಿ ಸರ್ಕಾರಿ ಕೆರೆಯ ಜಾಗದಲ್ಲಿ ಶೇಡ್ ನಿರ್ಮಾಣವುದಲ್ಲದೆ. ಗೋವುಗಳ ತಲೆ ಬುರುಡೆಗಳನ್ನು ಕೆರೆಗೆ ಬಿಸಾಡುವುದಲ್ಲದೆ. ಆಕ್ರಮ ಗೋಮಾಂಸದ ದಂದೆ ನಡೆಸುತ್ತಿರುವ ಎಷ್ಟರ ಮಟ್ಟಿಗೆ ಸರಿ. ಇಷ್ಟಾದರೂ ಅಧಿಕಾರಿಗಳು ಮಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.