ಸಬ್ಬಕ್ಕಿಯು ಹೆಚ್ಚಿನ ಫೈಬರ್ ಅಂಶವನ್ನು ಒಳಗೊಂಡಿದ್ದು ಇದನ್ನು ನಮ್ಮ ದಿನ ನಿತ್ಯದ ಆಹಾರಕ್ರಮದಲ್ಲಿ ಒಳಗೂಡಿಸಿಕೊಂಡರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೇ ಸಬ್ಬಕ್ಕಿಯನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಸುಧಾರಿಸುವುದರೊಂದಿಗೆ ಕೂದಲು ಉದುರುವಿಕೆಯನ್ನು ತಡೆಗಟ್ಟುತ್ತದೆ. ಸುಲಭವಾಗಿ ಸಬ್ಬಕ್ಕಿ ಕಿಚಡಿ ಯಾವ ರೀತಿ ಮಾಡುವುದು ಎಂಬುದನ್ನು ನೋಡೋಣ...
ಬೇಕಾಗುವ ಸಾಮಗ್ರಗಳು:
ಸಬ್ಬಕ್ಕಿ – 1 ಕಪ್
ಜೀರಿಗೆ – 1 ಚಮಚ
ಹಚ್ಚಿದ ಹಸಿರುಮೆಣಸಿನ ಕಾಯಿ – 1
ಹೆಚ್ಚಿದ ಟೊಮೆಟೊ – 1
ಹಚ್ಚಿದ ಈರುಳ್ಳಿ – 1
ಎಣ್ಣೆ – 2 ಚಮಚ
ಶೇಂಗಾ – 1 ಚಮಚ
ಹಚ್ಚಿದ ಆಲೂಗೆಡ್ಡೆ – 1
ಉಪ್ಪು – ರುಚಿಗೆ ತಕ್ಕಷ್ಟು
ಹಚ್ಚಿದ ಕೊತ್ತಂಬರಿ ಸೊಪ್ಪು – 1 ಚಮಚ
ಮಾಡುವ ವಿಧಾನ:
ಒಂದು ಬೌಲ್‌ನಲ್ಲಿ ಸಬ್ಬಕ್ಕಿಯನ್ನು ಹಾಕಿಕೊಂಡು ಅದಕ್ಕೆ ನೀರನ್ನು ಸೇರಿಸಿಕೊಂಡು 30 ನಿಮಿಷಗಳ ಕಾಲ ನೆನೆಸಿಕೊಳ್ಳಿ. ನಂತರ ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿಕೊಂಡು ಕಾದ ಬಳಿಕ ಅದಕ್ಕೆ ಜೀರಿಗೆ, ಹಸಿರು ಮೆಣಸಿನಕಾಯಿ, ಈರುಳ್ಳಿ, ಟೊಮೆಟೊ, ಆಲೂಗೆಡ್ಡೆ ಮತ್ತು ಶೇಂಗಾ ಬೀಜವನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಂಡು ಮತ್ತೊಂದು ಬಾರಿ ತಿರುವಿಕೊಳ್ಳಿ. ಬಳಿಕ ಇದಕ್ಕೆ ನೆನೆಸಿಟ್ಟ ಸಬ್ಬಕ್ಕಿಯನ್ನು ಸೇರಿಸಿಕೊಂಡು ಸಬ್ಬಕ್ಕಿ ಮಿಶ್ರಣದೊಂದಿಗೆ ಹೊಂದಿಕೊಳ್ಳುವವರೆಗೆ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿಕೊಂಡು ಮತ್ತೊಂದು ಬಾರಿ ಮಿಕ್ಸ್ ಮಾಡಿ. ಈಗ ಸಬ್ಬಕ್ಕಿ ಕಿಚಡಿ ಸವಿಯಲು ಸಿದ್ಧ.