ತೂಕವನ್ನು ಹೆಚ್ಚಿಸಿಕೊಳ್ಳಲು ಈ ಆರೋಗ್ಯಕರ ಪಾನೀಯವನ್ನು ಸೇವಿಸಿ
ಒಂದು ಹಿಡಿ ಗೋಡಂಬಿಯನ್ನು ರಾತ್ರಿ ಪೂರ್ತಿ ನೆನಸಿಡಿ. ನಂತರ ಸ್ವಲ್ಪ ನೀರು ಹಾಕಿ ಗೋಡಂಬಿಯನ್ನು ನುಣ್ಣಗೆ ರುಬ್ಬಿಕೊಂಡು ಗ್ಲಾಸ್‌ಗೆ ಹಾಕಿ ಸ್ವಲ್ಪ ನೀರನ್ನು ಹಾಕಿ ಬಳಿಕ 1 ಗ್ಲಾಸ್ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದಕ್ಕೆ 1 ಚಮಚ ಕೆಂಪು ಕಲ್ಲು ಸಕ್ಕರೆಯನ್ನು ಕುಟ್ಟಿ ಪುಡಿ ಮಾಡಿ ಹಾಲಿನೊಂದಿಗೆ ಬೆರೆಸಿ. ಕಲ್ಲು ಸಕ್ಕರೆ ಇಲ್ಲ ಎಂದರೆ 1 ಚಮಚ ಜೇನುತುಪ್ಪವನ್ನು ಬಳಸಿ. ನಂತರ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದರಿಂದ ವೇಗವಾಗಿ ತೂಕವನ್ನು ಹೆಚ್ಚುಸಬಹುದು. ಚಿಕ್ಕ ಮಕ್ಕಳಿಂದ ವಯಸ್ಸಾದವರು ಕೂಡ ಇದನ್ನು ಸೇವಿಸಬಹುದು.
ಆರೋಗ್ಯಕರ ತೂಕ ಹೆಚ್ಚಳಕ್ಕೆ ಶೇಕ್‌ಗಳು
ಬಾಳೆಹಣ್ಣಿನ ಬೆಣ್ಣೆ ಶೇಕ್
*2 ಚಮಚ ಕಡಲೆಕಾಯಿ ಅಥವಾ ಬಾದಾಮಿ ಬೆಣ್ಣೆ
*1 ಬಾಳೆಹಣ್ಣು
*1 ಕಪ್ ಚಾಕೊಲೇಟ್ಹಾಲು
*1 ಚಮಚ ಪ್ರೋಟೀನ್ ಪುಡಿ (ಮಿಶ್ರಿತ ಶೇಕ್)
ಚಾಕೊಲೇಟ್ ಶೇಕ್
*ಡಾರ್ಕ್ ಚಾಕೊಲೇಟ್‌ನ 3 ಚೂರುಗಳು
*1 ಪ್ರೋಟೀನ್ ಪುಡಿ
*1 ಕಪ್ ಚಾಕೊಲೇಟ್ ಹಾಲು (ಮಿಶ್ರಿತ) ಶೇಕ್