Cinema : ಬಾಲಿವುಡ್‌ ಸಿನಿಮಾಗಾಗಿ ಸಂಭಾವನೆ ಇಳಿಸಿಕೊಂಡ ನಟಿ ಶ್ರೀಲೀಲಾ!

Cinema: ಡ್ಯಾನ್ಸಿಂಗ್ ಕ್ವೀನ್ ಎಂದೇ ಪಾಪ್ಯುಲರ್ ಆಗಿರುವ ಶ್ರೀಲೀಲಾ ಈಗ ಬಾಲಿವುಡ್‌ನಲ್ಲಿ ಕೂಡ ಬ್ಯುಸಿಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಹಿಟ್ ಹೀರೋಯಿನ್‌ ಆಗಿ ಬೆಳೆದಿರುವ ಈ ಚೆಲುವೆ, ಈಗ ಹಿಂದಿ ಚಿತ್ರರಂಗದ ಕಡೆಗೂ ತನ್ನ ಪ್ರೆಸೆನ್ಸ್‌ ಹಂಚುತ್ತಿದ್ದಾರೆ.

ಇದೀಗ, ಶ್ರೀಲೀಲಾ ಅವರ ಬಗ್ಗೆ ಹೊಸದೊಂದು ಚರ್ಚೆ ಶುರುವಾಗಿದೆ. ಬಾಲಿವುಡ್‌ನಲ್ಲಿ ನಟಿಸಲು ಅವರು ತಮ್ಮ ಸಾಮಾನ್ಯ ಸಂಭಾವನೆಗಿಂತ ಕಡಿಮೆ ಹಣಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬೆಳವಣಿಗೆ ಚಿತ್ರೋದ್ಯಮದಲ್ಲಿ ಕುತೂಹಲ ಹುಟ್ಟಿಸಿದೆ.

ತಮ್ಮ ಬಾಲಿವುಡ್‌ ನಲ್ಲಿ ಗಟ್ಟಿಯಾಗಿ ನೆಲೆಊರುವ ಉದ್ದೇಶದಿಂದ ಶ್ರೀಲೀಲಾ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ತೆಲುಗು ಚಿತ್ರರಂಗದಲ್ಲಿ ಅವರು ಈಗಾಗಲೇ ಟಾಪ್ ಲೀಡ್‌ ನಟಿಯರ ಸಾಲಿನಲ್ಲಿ ಸ್ಥಾನ ಪಡೆದಿದ್ದು, ಹಲವು ಬೃಹತ್ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡಲು ಅವರಿಗಾಗಿ ಸಾಲಿನಲ್ಲಿ ನಿಂತಿದ್ದಾರೆ.

ಈ ಸುದ್ದಿಗೆ ಇನ್ನೂ ಅಧಿಕೃತ ದೃಢೀಕರಣ ಬಂದಿಲ್ಲದಿದ್ದರೂ, ಬಾಲಿವುಡ್‌ ಹಾಗೂ ಟಾಲಿವುಡ್‌ ಅಭಿಮಾನಿಗಳಲ್ಲಿ ಇದೊಂದು ಹಾಟ್‌ ಟಾಪಿಕ್ ಆಗಿ ಪರಿಣಮಿಸಿದೆ.

 

 

 

Author:

...
Sushmitha N

Copy Editor

prajashakthi tv

share
No Reviews