Chitra kundapura : ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ಚೈತ್ರಾ ಕುಂದಾಪುರ

Chaitra kundapura :

ಬಿಗ್‌ ಬಾಸ್‌ ಕನ್ನಡ 11 ನೇ ಸೀಸನ್‌ ನಲ್ಲಿ ಸ್ಪರ್ಧಿಸಿ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದ ಚೈತ್ರಾ ಕುಂದಾಪುರ ಇದೀಗ ಮದುವೆ ಸಂಭ್ರಮದಲ್ಲಿದ್ದಾರೆ. ಚೈತ್ರಾ ಕುಂದಾಪುರ ಮನೆಯಲ್ಲಿ ಮೆಹೆಂದಿ ಶಾಸ್ತ್ರ ನೆರವೇರಿದ್ದು, ಮೇ 9 ರಂದು ಚೈತ್ರಾ ಕುಂದಾಪುರ ಮದುವೆ ನಡೆಯಲಿದೆ. ಪ್ರೀತಿಸಿದ ಹುಡುಗನ ಜೊತೆಗೆ ಸರಳವಾಗಿ ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ​​​​ದೇವಸ್ಥಾನದಲ್ಲಿ ಮದುವೆ ಆಗ್ತಾ ಇದಾರೆ ಎನ್ನಲಾಗ್ತಿದೆ.

ಚೈತ್ರಾ ಕುಂದಾಪುರ ಅವರದ್ದು ಲವ್‌ ಕಮ್‌ ಆರೇಂಜ್ಡ್‌ ಮ್ಯಾರೇಜ್‌, ತಮ್ಮ 12 ವರ್ಷಗಳ ಪ್ರೀತಿಗೆ ಕುಟುಂಬಸ್ಥರ ಸಮ್ಮತಿ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ. ಈಗಾಗಲೇ ವಿವಾಹ ಪೂರ್ವ ಶಾಸ್ತ್ರಗಳು ಆರಂಭವಾಗಿದ್ದು, ಮೆಹಂದಿ ಶಾಸ್ತ್ರ ಕೂಡ ಅದ್ದೂರಿಯಾಗಿ ಸ್ನೇಹಿತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದೆ. ಇನ್ನು ಚೈತ್ರಾ ಕೈಯಲ್ಲಿ ಮದರಂಗಿಯ ರಂಗು ಅರಳಿದೆ. ಇನ್ನು ಪ್ರೀತಿಸಿದ ಹುಡುಗನ ಬಗ್ಗೆ ಯಾವುದೇ ಮಾಹಿತಿಯನ್ನು ಕೂಡ ಚೈತ್ರಾ ಕುಂದಾಪುರ ರಿವೀಲ್‌ ಮಾಡಿಲ್ಲ. 

Author:

...
Sushmitha N

Copy Editor

prajashakthi tv

share
No Reviews