ಶಿರಾ:
ಶಿರಾ ತಾಲ್ಲೂಕಿನ ಹೊಸೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಬಾರಳ್ಳಿ ಗ್ರಾಮದ ಶಾಲೆಯ ದುಸ್ಥಿತಿ ಹೇಳತೀರದಾಗಿದೆ. ಹೌದು ಶಾಲೆಯ ಕಟ್ಟಡಗಳು ಬಿರುಕು ಬಿಟ್ಟಿದೆ, ಅಲ್ದೇ ಮೇಲ್ಛಾವಣಿ ಸೋರುತ್ತಿದ್ದು ಮಳೆ ಬಂದ್ರೆ ಮಳೆ ನೀರಲ್ಲೇ ನೆನೆಯುತ್ತಾ ಪಾಠ ಕೇಳಬೇಕಾದ ದುಸ್ಥಿತಿ ಇದೆ. ಇನ್ನು ಅದ್ಯಾವಾಗ ಕಟ್ಟಡ ಬೀಳುತ್ತೋ ಅಂತಾ ಭಯದಲ್ಲೇ ಮಕ್ಕಳು, ಶಿಕ್ಷಕರು ಇದ್ದಾರೆ.
ಇನ್ನು ಈ ಶಾಲೆಯಲ್ಲಿ ಒಂದು ರಿಂದ ಏಳನೇ ತರಗತಿಯ ಸುಮಾರು 65 ವಿದ್ಯಾರ್ಥಿಗಳಿದ್ದಾರೆ. ಆದ್ರೆ ಶಾಲ ಮಕ್ಕಳ ತಕ್ಕಂತೆ ಕೊಠಡಿಗಳು ಇಲ್ಲ. ಜೊತೆಗೆ ಇರುವ ಕೊಠಡಿಗಳು ಸಂಪರ್ಣ ಹಾಳಾಗಿದ್ದು ಯಾವ ಬೀಳುತ್ತೋ ಅನ್ನೋ ಆತಂಕದಲ್ಲೇ ಇದ್ದಾರೆ. ಕಡು ಬಡವರು ಮಾತ್ರ ಈ ಶಾಲೆಯಲ್ಲಿ ವ್ಯಾಸಾಂಗ ಮಾಡ್ತಾ ಇದ್ದು, ಪಾಲಕರು ಆತಂಕದಲ್ಲಿಯೇ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಮುಖ್ಯ ಶಿಕ್ಷಕರು ಈಗಾಗಲೇ ಇಲಾಖೆಗೆ ಮನವಿ ಮಾಡಿದ್ದಾರೆ. ಸರ್ಕಾರ ಶಿಕ್ಷಣ ಇಲಾಖೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು, ಹಲವು ಸೌಲಭ್ಯ ಕಲ್ಪಿಸಿದರೂ ಸಹ ಕೆಲ ಸರ್ಕಾರಿ ಶಾಲೆಗಳು ಮೂಲ ಸೌಲಭ್ಯದಿಂದ ವಂಚಿತವಾಗಿ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗಿವೆ.
ಈ ಶಾಲೆಗೆ ಶಿಕ್ಷಣ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾಳಜಿ ತೋರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸ್ತಾ ಇದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಶಿಥಿಲಗೊಂಡಿರುವ ಶಾಳಾ ಕೊಠಡಿಗಳನ್ನು ಕೆಡವಿ ಹೊಸ ಕಟ್ಟಡವನ್ನು ನಿರ್ಮಿಸಿಕೊಟ್ಟು ಮಕ್ಕಳ ವಿದ್ಯಾಭ್ಯಾಸಕ್ಕೆ ದಾರಿ ಮಾಡಿಕೊಡಬೇಕಿದೆ.