ಚಿಕ್ಕಬಳ್ಳಾಪುರ : ವಿಕೆಂಡ್ ಹಾಟ್ ಫೇವರೆಟ್ ತಾಣ ನಂದಿಗಿರಿಧಾಮ ಒಂದು ತಿಂಗಳು ಕಾಲ ಬಂದ್ ...!

ಚಿಕ್ಕಬಳ್ಳಾಪುರ : 

ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ಪ್ರವಾಸಿಗರ ಹಾಟ್‌ ಫೇವರೆಟ್‌ ಜಾಗವಾದ ನಂದಿಗಿರಿಧಾಮದ ರಸ್ತೆ ನವೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಒಂದು ತಿಂಗಳ ಕಾಲ ನಂದಿಬೆಟ್ಟದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್‌. ರವೀಂದ್ರರು ಆದೇಶ ಹೊರಡಿಸಿದ್ದಾರೆ.   

ನಂದಿಗಿರಿಧಾಮದ ರಸ್ತೆ  ಹದಗೆಟ್ಟ ಕಾರಣ ಸಂಪೂರ್ಣ ರಸ್ತೆ ಡಾಂಬರೀಕರಣ ಮಾಡುತ್ತಿದ್ದು, ಮಾರ್ಚ್ 24 ರಿಂದ ಏಪ್ರಿಲ್ 25ರವರೆಗೆ ನಂದಿಗಿರಿಧಾಮಕ್ಕೆ ವಾಹನ ಸಂಚಾರ ಹಾಗೂ ಪ್ರವಾಸಿಗರ ಓಡಾಟಕ್ಕೆ ನಿಷೇಧಿಸಲಾಗಿದೆ. ಆದ್ರೆ ಪ್ರವಾಸಿಗರು ವೀಕೆಂಡ್‌ ನಲ್ಲಿ ಹೆಚ್ಚಾಗಿ ನಂದಿಬೆಟ್ಟಕ್ಕೆ ಬರುವ ಕಾರಣ ವಾರಾಂತ್ಯದಲ್ಲಿ ಶುಕ್ರವಾರ ಸಂಜೆ 6.30 ರಿಂದ ಸೋಮವಾರ ಬೆಳಿಗ್ಗೆ 8 ಗಂಟೆವರೆಗೂ ಪ್ರವಾಸಿಗರಿಗೆ ಅವಕಾಶ ನೀಡಿದ್ದು, ಉಳಿದ ದಿನಗಳಲ್ಲಿ ನಂದಿಗಿರಿಧಾಮಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ಏರಲಾಗಿದೆ.

Author:

...
Editor

ManyaSoft Admin

share
No Reviews