ಚಿಕ್ಕಬಳ್ಳಾಪುರ : ವಿಧಿಯ ಅಟ್ಟಹಾಸಕ್ಕೆ ಅಪ್ಪ- ಮಗಳ ದುರಂತ ಅಂತ್ಯ...!

ಮೃತ ನಾಗರಾಜ್‌ (42) ಮತ್ತು ಮಗಳು ಧನುಶ್ರೀ (12)
ಮೃತ ನಾಗರಾಜ್‌ (42) ಮತ್ತು ಮಗಳು ಧನುಶ್ರೀ (12)
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಅದೊಂದು‌ ಸುಂದರ ಕುಟುಂಬ ಪತಿ- ಪತ್ನಿ ಜೊತೆ ಮುದ್ದಾದ ಹೆಣ್ಣು ಮಗು, ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ಸಂಸಾರ ಅವರದ್ದು, ಆದರೆ ವಿಧಿಯಾಟಕ್ಕೆ ತಂದೆ- ಮಗಳು ದುರಂತ ಅಂತ್ಯ ಕಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ವಿಧಿಯ ವಕ್ರದೃಷ್ಟಿಗೆ ಈ ಸುಂದರ ಸಂಸಾರವೇ ನಾಶವಾಗಿದೆ. 

ಮಗಳು ಈಜು ಕಲಿಯಬೇಕೆಂಬ ಆಸೆಯನ್ನು ಈಡೇರಿಸಲು ಹೋದ ತಂದೆ ಮಗಳು ಇಬ್ಬರು ಕೂಡ ಸಾವನ್ನಪ್ಪಿದ್ದು, ಮನೆ ಯಜಮಾನ ಹಾಗೂ ಮಗಳನ್ನು ಕಳೆದುಕೊಂಡ ಹೆತ್ತಮ್ಮನ ಸ್ಥಿತಿ ಹೇಳತೀರದಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಾಗರಾಜ್ ಕುಟುಂಬ ವಾಸವಾಗಿದ್ದರು. ನಾಗರಾಜ್‌ಗೆ 12 ವರ್ಷದ ಧನುಶ್ರೀ ಎಂಬ ಮಗಳು ಇದ್ದು, ಪಾಠ ಪ್ರವಚನ‌, ಆಟ ಪಾಠಗಳಲ್ಲಿ ಧನುಶ್ರೀ ಚರುಕಾಗಿದ್ದಳು. ಶಾಲೆಗೆ ರಜೆ ಇದ್ದು ತನ್ನ ಅಪ್ಪ ನಾಗರಾಜ್‌ಗೆ ತನಗೆ ಈಜು ಕಲಿಸುವಂತೆ ಒತ್ತಾಯಿಸಿದ್ದಾಳೆ. ಮಗಳು ಧನುಶ್ರೀ ಒತ್ತಾಯಕ್ಕೆ ಮಣಿದ ಅಪ್ಪ ನಾಗರಾಜ್‌ ನಿನ್ನೆ ಮಧ್ಯಾಹ್ನ ಮಗಳನ್ನು ಕೆರೆಯಲ್ಲಿ ಈಜು ಕಲಿಸಲು ಮಗಳು ಧನುಶ್ರೀ ಸೊಂಟಕ್ಕೆ ಹಗ್ಗ ಕಟ್ಟಿ ಕೆರೆಗೆ ಇಳಿಸಿದ್ದಾನೆ. ಕೆರೆಯ ಒಳಗೆ ಇಳಿದ ಮಗಳು ಹೊರಗೆ ಬಾರದ ಕಾರಣ ಆತಂಕಗೊಂಡ ತಂದೆ ಮಗಳ ರಕ್ಷಣೆಗೆ  ಕೆರೆಗೆ ಹಾರಿದ್ದಾರೆ .ಕೆರೆಯಲ್ಲಿ ಊಳು ತುಂಬಿದ್ದರಿಂದ ಹೊರಬರಲು ಸಾದ್ಯವಾಗದೇ ಮಗಳೊಂದಿಗೆ ತಂದೆಯೂ ದಾರುಣ ಸಾವನ್ನಪ್ಪಿದ್ದಾರೆ.

ಮನೆ ಯಜಮಾನ, ಹೆತ್ತ ಮಗಳನ್ನು ಕಳೆದುಕೊಂಡು ತಾಯಿ ಅನಾಥಳಾಗಿದ್ದು, ಆಕೆಯ ಸಂಕಟ ಮಾತ್ರ ಹೇಳತೀರದಾಗಿತ್ತು. ತಂದೆ ಮಗಳ ಮೃತ ದೇಹಗಳನ್ನು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದು, ಆಸ್ಪತ್ರೆ ಬಳಿ ಶಾಸಕ ಬಿ ಎನ್ ರವಿಕುಮಾರ್ ಭೇಟಿ ನೀಡಿ, ಮೃತರ ಕುಟಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ ಬೇಸಿಗೆ ಅಂತೇಳಿ ಮಕ್ಕಳು ಕೆರೆ ಕುಂಟೆ ಬಾವಿಗಳಲ್ಲಿ ಈಜಲು ಹೋಗಿ ಪ್ರಾಣ ಕಳೆದು ಕೊಳ್ಳುತಿದ್ದಾರೆ ಪೋಷಕರು ಮಕ್ಕಳ ಮೇಲೆ ನಿಗಾ ಇಡಬೇಕು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವಂತೆ ಶಾಸಕ ರವಿಕುಮಾರ್‌ ಮನವಿ ಮಾಡಿದ್ದಾರೆ.

ಅದೇನೆ ಆಗಲಿ. ವಿಧಿಯ ವಕ್ರದೃಷ್ಟಿಗೆ ಸುಂದರ ಸಂಸಾರವೇ ನಾಶವಾಗಿದೆ. ಒಟ್ಟಾರೆ ಬದುಕಿ ಬಾಳಬೇಕಿದ್ದ ಮಗಳ ಸಾವಿನೊಂದಿಗೆ ತಂದೆಯೂ ವಿಧಿಯಾಟಕ್ಕೆ ಬಲಿಯಾಗಿರುವುದು ವಿಪರ್ಯಾಸವೇ ಸರಿ.

Author:

...
Sushmitha N

Copy Editor

prajashakthi tv

share
No Reviews