ಚಿಕ್ಕಬಳ್ಳಾಪುರ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರತೀಕಾರವಾಗಿ ಭಾರತ ಆಪರೇಶನ್ ಸಿಂಧೂರ್ ಕಾರ್ಯಾಚರಣೆಯ ನಡೆಸಿತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೈನಿಕರಿಗೆ ಗೌರವ ಸಮರ್ಪಣೆಗಾಗಿ ದೇಶದೆಲ್ಲೆಡೆ ತಿರಂಗ ಯಾತ್ರೆಯನ್ನು ಕೈಗೊಳ್ಳಲಾಗಿತ್ತು. ಅದರಂತೆ ಚಿಕ್ಕಬಳ್ಳಾಪುರದಲ್ಲಿ ನಾಗಾರ್ಜುನ ವಿಧ್ಯಾ ಸಂಸ್ಥೆಯ ಎನ್ ಸಿ ಸಿ ವಿಭಾಗದ ವತಿಯಿಂದ ನಗರದಲ್ಲಿ ತಿರಂಗ ಯಾತ್ರೆ ನಡೆಯಿತು. ಕಾಲೇಜಿನ 60 ಕ್ಕೂ ಹೆಚ್ಚು ಎನ್ ಸಿ ಸಿ ವಿಭಾಗದ ವಿದ್ಯಾರ್ಥಿಗಳು ಯಾತ್ರೆಯಲ್ಲಿ ಪಾಲ್ಗೊಂಡು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ನಡೆಸಿದ್ದು, ನೇವಿ, ಆರ್ಮಿ ಹಾಗೂ ಏರ್ ಫೋರ್ಸ್ ಗೆ ಗೌರವ ಸಮರ್ಪಣೆ ಮಾಡಿ ಜೊತೆಗೆ ಆಪರೇಶನ್ ಸಿಂಧೂರ್ ಕಾರ್ಯಾಚರೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.
ಎನ್ ಸಿ ಸಿ ಆಫೀಸರ್ ಮಹಮದ್ ಶಾಕಿರ್ ತಿರಂಗ ಯಾತ್ರೆಯ ನೇತೃತ್ವ ವಹಿಸಿ ಮಾತನಾಡಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಮರ್ಪಣೆ ಮಾಡುವ ಉದ್ದೇಶಕ್ಕಾಗಿ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಜನರಲ್ಲಿ ಜಾಗೃತಿ ಕೂಡ ಮೂಡಿಸಲಾಗುತ್ತಿದೆ ಎಂದರು. ನಂತರ ನಾಗಾರ್ಜುನ ಕಾಲೇಜಿನ ಎಮ್ ಬಿ ಎ ವಿಭಾಗದ ಹೆಚ್ಒಡಿ ಗೀತಾಂಜಲಿ ಮಾತನಾಡಿ, ಗಡಿಯಲ್ಲಿ ನಿಂತು ಪ್ರಾಣವನ್ನು ಲೆಕ್ಕಿಸದೆ ನಮ್ಮನ್ನು ಕಾಪಾಡುತ್ತಿರುವ ಸೈನಿಕರ ಸೇವೆಯ ಬಗ್ಗೆ ಅರಿವು ಮೂಡಿಸುವುದು ಈ ಯಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.
ಇನ್ನು ಈ ತಿರಂಗ ಯಾತ್ರೆಯಲ್ಲಿ ನಾಗಾರ್ಜುನ ಕಾಲೇಜಿನ ಎನ್ ಸಿ ಸಿ ವಿಭಾಗದ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರಾದ ಗೀತಾಂಜಲಿ, ಶ್ರೀ ರಾಮ್, ಗೋವರ್ಧನ್, ಶ್ರೀರಾಮ್ ಹಾಗೂ ವಿದ್ಯಾರ್ಥಿಗಳು ಸೇರಿ ಹಲವರು ಭಾಗಿಯಾಗಿದ್ದರು.