ಚಿಕ್ಕಬಳ್ಳಾಪುರ : ಅಕ್ರಮ ಮದ್ಯ ಮಾರಾಟ ಮಾಡ್ತಿದ್ದ ಬಾರ್ ಗಳ ಮೇಲೆ ರೇಡ್

ಪೊಲೀಸ್ ಇಲಾಖೆ ಸೀಜ್‌ ಮಾಡಿರುವ ಮದ್ಯ
ಪೊಲೀಸ್ ಇಲಾಖೆ ಸೀಜ್‌ ಮಾಡಿರುವ ಮದ್ಯ
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ:

ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಆಕ್ರಮ‌ ಮದ್ಯ ಮಾರಾಟ ಮಾಡ್ತಾ ಇರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು. ಕೂಡಲೇ ಅಲರ್ಟ್‌ ಆದ ಪೊಲೀಸ್‌ ಇಲಾಖೆ ಸೂರ್ಯ ಹುಟ್ಟೊಕು ಮುಂಚೆಯೇ ಅಕ್ರಮ‌ ಮಧ್ಯ ಮಾರಾಟ ಮಾಡುತ್ತಿದ್ದ ಬಾರ್‌ಗಳ ಮೇಲೆ ರೇಡ್‌ ಮಾಡಿ ಅಕ್ರಮ ಮದ್ಯವನ್ನು ಸೀಜ್‌ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಹಾಲು ಸಿಗುತ್ತೋ ಇಲ್ವೊ ಗೊತ್ತಿಲ್ಲ. ಆದರೆ 24×7 ಎಣ್ಣೆ ಮಾತ್ರ ಸಿಗುತ್ತೆ. ಹಳ್ಳಿಗಳಲ್ಲಿ ಆಂಗಡಿಗಳ ಮುಂದೆ ಬಾಗಿಲು ತಟ್ಟಿದರೆ ಸಾಕು ಇಸಿಯಾಗಿ ಎಣ್ಣೆ ಸಿಗುತ್ತೆ. ಅಲ್ಲದೇ ಚಿಕ್ಕಬಳ್ಳಾಪುರ ನಗರದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ‌ ಬೇಕಾದಷ್ಟು ಎಣ್ಣೆ ಯಾವಾಗ ಬೇಕಾದರೂ ರಾಜಾರೋಷವಾಗಿ ಸಿಗುತ್ತೆ. ಚಿಕ್ಕಬಳ್ಳಾಪುರ ನಗರಕ್ಕೆ ಹಳ್ಳಿಗಳಿಂದ ಬರುವ ಕಾರ್ಮಿಕರು ಕೆಲಸಕ್ಕೆ ಹೋಗದೇ ಮದ್ಯದ ಅಂಗಡಿಗಳ ಕಡೆ ಮುಖ ಮಾಡ್ತಾ ಇದ್ದಾರೆ.

ಬಾರ್‌ಗಳನ್ನು ಬೆಳಗ್ಗೆ 10 ಗಂಟೆ ನಂತರ ತೆಗೆಯಬೇಕೆಂಬ ನಿಯಮ ಇದ್ದರೂ ಕೂಡ, ಆದೇಶವನ್ನು ಧಿಕ್ಕರಿಸಿ ಚಿಕ್ಕಬಳ್ಳಾಪುರದ ಚರಣ್, ನಾಗಜ್ಯೋತಿ ಬಾರ್‌ಗಳಲ್ಲಿ 24 ಗಂಟೆಯೂ ಎಣ್ಣೆ ಮಾರಾಟ ಮಾಡ್ತಾ ಇದ್ದರು. ಈ ಬಗ್ಗೆ ಹಲವು ದೂರುಗಳು ಬಂದ ಬಳಿಕ ಅಲರ್ಟ್‌ ಆದ ಪೊಲೀಸ್‌ ಇಲಾಖೆ ಇಂದು ಸರ್ಕಲ್ ಇನ್ಸ್‌ ಪೆಕ್ಟರ್ ಮಂಜುನಾಥ್ ಅವರ ತಂಡ ಬೆಳ್ಳಂಬೆಳಗ್ಗೆ 6 ಗಂಟೆಗೆ ಚರಣ್ ಹಾಗೂ ನಾಗಲಕ್ಷ್ಮೀ ಬಾರ್‌ ಅಂಡ್‌ ರೆಸ್ಟೋರೆಂಟ್‌ ಮೇಲೆ ದಾಳಿ ಮಾಡಿದ್ದು, ಸುಮಾರು 46 ಲೀಟರ್‌ ಅಕ್ರಮ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ. ಚರಣ್‌ ಬಾರ್‌ನಲ್ಲಿ ಆಕ್ರಮವಾಗಿ ಮಾರಾಟ  ಮಾಡುತ್ತಿದ್ದ 12 ಸಾವಿರ ಬೆಲೆ‌ ಬಾಳುವ 27 ಲೀಟರ್‌ ಮದ್ಯ ಮತ್ತು ಒಂದು ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ. ನಾಗಜ್ಯೋತಿ ಬಾರ್ ಅಂಡ್‌ ರೆಸ್ಟೋರೆಂಟ್‌ನಲ್ಲಿ 8 ಸಾವಿರ ಬೆಲೆ ಬಾಳುವ 19 ಲೀಟರ್ ಮದ್ಯವನ್ನು ಸೀಜ್‌ ಮಾಡಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ಕಾರ್ಮಿಕರ ಹಾದಿ ತಪ್ಪಿಸುತ್ತಿದ್ದ ಬಾರ್‌ಗಳ ಮೇಲೆ ರೇಡ್‌ ಆಗಿದ್ದು, ಮುಂದಿನ ದಿನಗಳಲ್ಲಿ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟಕ್ಕೆ ಯಾವ ರೀತಿ ಬ್ರೇಕ್‌ ಹಾಕುತ್ತೋ ಕಾದು ನೋಡಬೇಕಿದೆ.

Author:

...
Editor

ManyaSoft Admin

share
No Reviews