ಚಿಕ್ಕಬಳ್ಳಾಪುರ : ಹೆಜ್ಜೇನು ದಾಳಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು . ಚಿಂತಾಮಣಿ
ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು . ಚಿಂತಾಮಣಿ
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ತಾಪಮಾನ ಹೆಚ್ಚಾಗ್ತಾ ಇದ್ದು, ಆಕಸ್ಮಿಕ ಬೆಂಕಿಗಳ ಜೊತೆಗೆ ಹೆಜ್ಜೇನುಗಳ ಅಟ್ಯಾಕ್‌ ಹೆಚ್ಚಾಗ್ತಿದೆ. ರಾಮನವಮಿಯಂದು ಚಿಕ್ಕಬಳ್ಳಾಪುರದ ರಂಗಸ್ಥಳದಲ್ಲಿ ಭಕ್ತರ ಮೇಲೆ ಹೆಜ್ಜೇನು ದಾಳಿ ನಡೆಸಿದ್ದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲೇ ಮತ್ತೊಂದು ಹೆಜ್ಜೇನು ದಾಳಿ ನಡೆಸಿರೋ ಘಟನೆ ನಡೆದಿದೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಆವರಣದಲ್ಲಿ ಹೆಜ್ಜೆನು ದಾಳಿ ಮಾಡಿದ್ದು, 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಇಬ್ಬರು ಉಪನ್ಯಾಕರ ಮೇಲೆ ಹೆಜ್ಜೇನು ಅಟ್ಯಾಕ್‌ ಮಾಡಿವೆ.

ಕಾಲೇಜು ಆವರಣದಲ್ಲಿ ಹೆಜ್ಜೇನು ಕಟ್ಟಿದ್ದು, ಬಿಸಿಲಿನ ತಾಪಮಾನಕ್ಕೆ ಹೆಜ್ಜೇನು ಏಕಾಏಕಿ ದಾಳಿ ಮಾಡಿವೆ. ಹೆಜ್ಜೆನು ದಾಳಿಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಹಾಗೂ ಉಪನ್ಯಾಕರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೂ ಕೂಡ ಹೆಜ್ಜೆನು ದಾಳಿ ನಡೆಸಿದ್ದು ದಾಳಿಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಇಬ್ಬರು ಉಪನ್ಯಾಸಕರಿಗೆ ಗಾಯಗಳಾಗಿದೆ. ಕೂಡಲೇ ಗಾಯಗೊಂಡವರು ಆಸ್ಪತ್ರೆಗೆ ಓಡಿ ಬಂದು ಚಿಕಿತ್ಸೆ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ಉಪನ್ಯಾಸಕರಿಗೆ ಚಿಂತಾಮಣಿಯ ಡೆಕ್ಕನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Author:

share
No Reviews