ಚಿಕ್ಕಬಳ್ಳಾಪುರ : ಹಕ್ಕಿ ಜ್ವರ ಆತಂಕ | ಜಿಲ್ಲೆಯಲ್ಲಿ ಹೈ ಅಲರ್ಟ್ ..!

ಚಿಕ್ಕಬಳ್ಳಾಪುರ :

ರಾಜ್ಯದಲ್ಲಿ ಮೊದಲ ಬಾರಿಗೆ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ. ಹೀಗಾಗಿ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ನೆರೆಯ ರಾಜ್ಯ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯಾಗಿರೋ ಚಿಕ್ಕಬಳ್ಳಾಪುರಕ್ಕೆ ಆಂಧ್ರದಿಂದ ಕೋಳಿಗಳ ಸಾಗಾಟ ನಡೀತಿದೆ. ಅಲ್ಲದೇ ಸಂತೆಗಳಲ್ಲೂ ಕೋಳಿಗಳ ಮಾರಾಟ ಎಗ್ಗಿಲ್ಲದೇ ನಡೆದಿದ್ದು. ಇದರಿಂದ  ಜಿಲ್ಲೆಯಲ್ಲಿ ಮತ್ತಷ್ಟು ಹಕ್ಕಿ ಜ್ವರ ಹೆಚ್ಚಾಗುವ ಭೀತಿ ಎದುರಾಗಿದೆ. ಆದ್ದರಿಂದ ಆಂಧ್ರದಿಂದ ತರುವ ಕೋಳಿಗಳಿಗೆ ಬ್ರೇಕ್‌ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ.

ನೆರೆಯ ಆಂಧ್ರದಿಂದ ಬರುವ ಕೋಳಿಗಳನ್ನು ನಿಷೇಧ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮೂರು ಕಡೆ ಚೆಕ್‌ಪೋಸ್ಟ್‌ಗಳನ್ನು ತೆರೆದಿದೆ.  ಬಾಗೇಪಲ್ಲಿ ಬಳಿ ಬೆಂಗಳೂರು ಹೈದಾರಬಾದ್ ಹೆದ್ದಾರಿಯಲ್ಲಿ, ಗೌರಿಬಿದನೂರು ತಾಲೂಕಿನ ಹಿಂದೂಪುರ ಮಾರ್ಗದ ಕುಡುಮಲಕುಂಟೆ ಬಳಿ, ಚಿಂತಾಮಣಿ ತಾಲೂಕಿನ ಯನಮಲಪಾಡಿ ಬಳಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಚೆಕ್‌ ಪೊಸ್ಟ್‌ಗಳ ಮೂಲಕ ಯಾವುದೇ ಕೋಳಿಗಳ ಎಂಟ್ರಿ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪಶುಪಾಲನಾ ಇಲಾಖೆಗೆ ಡಿಸಿ ಸೂಚನೆ ನೀಡಿದ್ದಾರೆ.

Author:

share
No Reviews